ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಲ ಸೌಲಭ್ಯ; ಜಿಪಂ ಎದುರು ಧರಣಿ

Lingaraj Badiger
Updated On : 27 Jun 2013, 11:01 am

ರಾಯಚೂರು: ಎಸ್‌ಜೆಎಸ್‌ಆರ್‌ವೈ ಯೋಜನೆ ಅಡಿ ಮಾನವಿ ತಾಲೂಕಿನಲ್ಲಿ ಸ್ವಸಹಾಯ ಗುಂಪುಗಳಿಗೆ ಸಹಾಯಧನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಜನಜಾಗೃತಿ ಸಮಿತಿ ಧರಣಿ ನಡೆಸಿತು.
ನಗರದ ಜಿಪಂ ಕಚೇರಿ ಎದುರು ಬುಧವಾರ ಧರಣಿ ನಡೆಸಿದ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಮಾನವಿ ತಾಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಕ್ಕಾಗಿ ಎಸ್‌ಜೆಎಸ್‌ಆರ್‌ವೈ ಯೋಜನೆ ಅಡಿ ಅರ್ಜಿ ಭರ್ತಿ ಮಾಡಿ 6 ತಿಂಗಳಾಗಿದ್ದರೂ ಸಾಲ ಸೌಲಭ್ಯ ದೊರೆತಿಲ್ಲ ಎಂದು ಆರೋಪಿಸಿದರು.
ಸಾಲ ಸೌಲಭ್ಯ ದೊರೆಯದೇ ಉದ್ಯೋಗಾಕಾಂಕ್ಷಿಗಳು ಗ್ರಾಮ ತೊರೆದು ಗುಳೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಕೂಡಲೇ ಜಿಪಂ ಆಡಳಿತವು ತಾಪಂ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ಒದಗಿಸುವಂತೆ ಆದೇಶಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಬಸವರಾಜ ನಕ್ಕುಂದಿ, ಅಬ್ರಾಹಂ ಜಾಗೀರಪನ್ನೂರು, ಲಿಂಗಣ್ಣ ಮಾಡಗಿರಿ ಸೇರಿ ಅನೇಕರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement