ಕಲಂ 371- ಅನ್ನದಾತನ ಮರೆಯದಿರಿ: ಪಟೇಲ್
ಜೇವರ್ಗಿ: ಈಗಾಗಲೇ ರಾಜ್ಯ ಸರ್ಕಾರ 371(ಜೆ) ಕಲಂ ತಿದ್ದುಪಡಿ ಅನುಷ್ಠಾನಕ್ಕಾಗಿ ಪ್ರಕ್ರಿಯೆಗಳು ಆರಂಭಿಸಿದ್ದು, ಮಹತ್ತರವಾದ ಯೋಜನೆಗಳಲ್ಲಿ ದೇಶಕ್ಕೆ ಅನ್ನ ನೀಡುವ ಅನ್ನದಾತನ ಅನುಕೂಲಕ್ಕಾಗಿ ಕೃಷಿ ಯೋಜನೆ ರೂಪಿಸಬೇಕು ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಪಟೇಲ್ ಒತ್ತಾಯಿಸಿದ್ದಾರೆ. ಹಿಂದುಳಿದ ಹೈ-ಕ.ಕ್ಕೆ ಈ ಯೋಜನೆಯಲ್ಲಿ ಶೈಕ್ಷಣಿಕ, ಆರ್ಥಿಕ, ಕೈಗಾರಿಕೋದ್ಯಮ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ ಸ್ಥಾನವನ್ನು ಕೃಷಿಗೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ರೈತರ ಬಾಳಿಗೆ ಆಶಾಕಿರಣವಾಗುವ ಸಹಕಾರ ಸಂಸ್ಥೆಗಳು ಮುಚ್ಚುವ ದುಸ್ಥಿತಿಯಲ್ಲಿವೆ. ಅಂತಹ ಸಹಕಾರಿ ಸಂಘಗಳನ್ನು ಪುನಶ್ಚೇತನಗೊಳಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ರಹೆಮಾನ್ ಪಟೇಲ್ ಒತ್ತಾಯಿಸಿದ್ದಾರೆ.