'ಗೂಡ್ಸ್ ಆಟೋ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿ'
ಲಿಂಗಸ್ಗೂರು: ಪಟ್ಟಣದಲ್ಲಿ ಗೂಡ್ಸ್ ಆಟೋಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಆಟೋಗಳ ಚಾಲಕರು ಹಾಗೂ ಮಾಲೀಕರು ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು.
ಸ್ಥಳೀಯ ಜೆಸ್ಕಾಂ ಕಚೇರಿ ಹಾಗೂ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಗೂಡ್ಸ್ ಆಟೋಗಳ ನಿಲುಗಡೆಗೆ ಈ ಹಿಂದೆ ಪಿಎಸ್ಐ ಅನುಮತಿ ನೀಡಿದ್ದರು. ಅದರಂತೆ ನಿಲುಗಡೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಸಿಪಿಐ ಅವರು ಏಕಾಏಕಿ ವಾಹನಗಳನ್ನು ತೆರವುಗೊಳಿಸಿದ್ದು, ಇದರಿಂದ ವಾಹನಗಳ ನಿಲುಗಡೆಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಪರಿಶೀಲಿಸಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ವಾಹನಗಳ ಮಾಲೀಕರು ಹಾಗೂ ಚಾಲಕರಾದ ಮೌನೇಶ, ರಿಯಾಜ್, ರಮೇಶ, ಅಮೀನ್, ಸೋಫಿಸಾಬ, ಗೂಲಯ್ಯ, ಶೇಖರಪ್ಪ, ಸೇರಿದಂತೆ ಮನವಿಯಲ್ಲಿ ಒತ್ತಾಸಿದ್ದಾರೆ.
ವಾಹನ ತೆರವಿಗೆ ಮನವಿ: ಪುರಸಭೆ ವ್ಯಾಪ್ತಿಯ ವಾರ್ಡ್ ಸಂ.18ರ ಸರ್ವೆ ನಂ.393/2ರ ಬಡಾವಣೆಯ ಸಾರ್ವಜನಿಕ ಉದ್ಯಾನವನದ ಜಾಗೆಯಲ್ಲಿ ಸುಮಾರು 150 ಖಾಸಗಿ ವಾಹನಗಳ ನಿಲುಗಡೆಯಿಂದ ವಾತಾವರಣ ಕಲುಷಿವಾಗುತ್ತಿದೆ. ವಾಹನಗಳ ಓಡಾಟದಿಂದ ಸುತ್ತಮುತ್ತಲಿನ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೆ ವಾಹನಗಳನ್ನು ತೆರವುಗೊಳಿಸಿ ಉದ್ಯಾನವನ ನಿರ್ಮಿಸಬೇಕು. ಇಲ್ಲದಿದ್ದರೆ ವಾರ್ಡ್ನ ಜನರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸುವುದಾಗಿ ವಾರ್ಡ್ನ ಗುಂಡೂರಾವ್, ಬಾಬುರೆಡ್ಡಿ, ಪ್ರಕಾಶ, ಹಿರೋಜಿ, ರಮೇಶ, ಶಿವಾನಂದ, ಪ್ರತಾಪರೆಡ್ಡಿ, ಸುಭಾಸ, ನಾರಾರ್ಯಣ, ವೀರೇಂದ್ರ ಕುಮಾರ ಸೇರಿದಂತೆ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.