ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜೀತದಾಳು: ವಸ್ತುನಿಷ್ಠ ಸಮೀಕ್ಷೆ ವರದಿ ಸಲ್ಲಿಕೆಗೆ ಎಸಿ ಸೂಚನೆ

Rashmi Kasaragodu
Updated On : 28 Jun 2013, 10:24 am

ಕನ್ನಡಪ್ರಭ ವಾರ್ತೆ   ಲಿಂಗಸ್ಗೂರು   ಜೂ.27
ತಾಲೂಕಿನಲ್ಲಿ ಜೀತದಾಳನ್ನು ಗುರುತಿಸುವ ಸಮೀಕ್ಷೆ ಕಾರ್ಯಕ್ಕೆ ನೇಮಕ ಮಾಡುವ ವಿವಿಧ ಇಲಾಖೆ ಅಧಿಕಾರಿಗಳು ವಸ್ತು ನಿಷ್ಠ ಸಮೀಕ್ಷೆ ವರದಿ ಸಲ್ಲಿಸಬೇಕೆಂದು ಸಹಾಯಕ ಆಯುಕ್ತ ಟಿ. ಯೋಗೇಶ್ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುರುವಾರ ಜರುಗಿದ ಜೀತಪದ್ಧತಿ ನಿರ್ಮೂಲನಾ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಬುಡಕಟ್ಟು ಜನಾಂಗ, ಬಡವರ ಹಾಗೂ ಸ್ಲಂ ಏರಿಯಾಗಳಲ್ಲಿ ಜೀತದಾಳುಗಳು ಹೆಚ್ಚಾಗಿ ಕಂಡು ಬರುವ ಸಾಧ್ಯತೆಯಿದ್ದು, ಜೀತದಾಳುಗಳನ್ನು ಗುರುತಿಸುವ ರೀತಿ ಮತ್ತು ಅವರ ಸಮೀಕ್ಷೆ ನಡೆಸುವ ವಿಧಾನದ ಕುರಿತು ಸಮಗ್ರವಾಗಿ ಮಾಹಿತಿ ತಿಳಿಯಬೇಕು.
ಸರ್ಕಾರದ ಕಂದಾಯ, ಕೃಷಿ, ರೇಷ್ಮೆ, ಗ್ರಾಪಂ, ಸಿಡಿಪಿಒ, ಸಮಾಜ ಕಲ್ಯಾಣ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ಸಹಯೋಗದ ಜಾಗೃತಿ ಸಮಿತಿಯೊಂದಿಗೆ ಪ್ರತಿ ಗ್ರಾಮಕ್ಕೆ ತೆರಳಿ ಜೀತದಾಳುಗಳ ಸಮೀಕ್ಷೆ ಕಾರ್ಯ ನಡೆಸಬೇಕು. ಈಗಾಗಲೆ ಜೀವಿಕ ಸಂಘಟನೆಯಿಂದ ಲಿಂಗಸ್ಗೂರು ತಾಲೂಕಿನಲ್ಲಿ 40 ಮತ್ತು ಸಿಂಧನೂರು ತಾಲೂಕಿನಲ್ಲಿ 102 ಜೀತದಾಳುಗಳ ಇರುವ ಕುರಿತು ಸಹಾಯಕ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಲೇಬರ್ ಇನ್ಸ್ಪೆಕ್ಟರ್ ಹೊನ್ನಪ್ಪ, ರೇಷ್ಮೆ ನಿರೀಕ್ಷಕ ರಾಸಿ ಸರ್ಜಾಪೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement