ನಗರಸಭೆ ಎದುರೇ ಜೂಜಾಟ
ಸಿಂಧನೂರು: ಸಿಂಧನೂರು ನಗರದ ನಗರಸಭೆ ಎದುರು ಕ್ರೂಸರ್ ಜೀಪಿನಲ್ಲಿ ಇಸ್ಪೀಟ್ ಜೂಜಾಡುತ್ತಿದ್ದ ಐವರನ್ನು ನಗರ ಠಾಣೆ ಪಿಎಸ್ಐ ಲಿಂಗಪ್ಪ ಮತ್ತವರ ತಂಡ ಬಂಧಿಸಿತು. ಜವಳಗೇರಿ ಗ್ರಾಮದ ಬಸವರಾಜ, ಅಶೋಕ, ರಜಾಕ, ಆದಯ್ಯ, ಆರ್.ಬಸವರಾಜ ಬಂಧಿತರು. ಇವರು ಆಟವಾಡುತ್ತಿದ್ದ ಕ್ರೂಸರ್ ವಾಹನ, 5 ಮೊಬೈಲ್, 3,400 ನಗದು ವಶಪಡಿಸಿಕೊಳ್ಳಲಾಯಿತು.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ಜೀಪಿನಲ್ಲಿ ಇಸ್ಪೀಟ್ ಆಡುತ್ತಿದ್ದ ಜೂಜುಕೋರರನ್ನು ಬಂಧಿಸುವಾಗ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.