ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಂಗಾಯಣ ಘಟಕ ಸ್ಥಾಪನೆಗೆ ಒತ್ತಾಯ

Rashmi Kasaragodu
Updated On : 28 Jun 2013, 10:27 am

ಗುಲ್ಬರ್ಗ: ನಗರದಲ್ಲಿ ರಂಗಾಯಣ ಘಟಕ ಸ್ಥಾಪನೆ ಮಾಡಬೇಕೆಂದು ಯುವ ರಂಗಕರ್ಮಿ ಹಾಗೂ ಜಾಕನಪಲ್ಲಿಯ ತಿಂಗಳ ಸಂಜೆ ಮತ್ತು ನಾನು ನಮ್ಮೂರು ಶಾಲಾ ಮಕ್ಕಳ ವೇದಿಕೆಯ ನಿರ್ದೇಶಕ ಅಶೋಕ ತೊಟ್ನಳ್ಳಿ ಮತ್ತು ಜಾಕನಪಲ್ಲಿಯ ತಿಂಗಳ ಸಂಜೆ ಯುವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಚಂದ್ರಶೇಖರ ಆಡಕಿ ಒತ್ತಾಯಿಸಿದ್ದಾರೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ ಪತ್ರ ಬರೆದಿರುವ ಅವರು, ಈ ಹಿಂದೆ ಗುಲ್ಬರ್ಗದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ರಂಗಾಯಣ ಘಟಕ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳ ತಿಳಿಸಿದ್ದರು. ಆದರೆ, ಇನ್ನುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದ್ದಾರೆ. ತಮ್ಮ ನೇತೃತ್ವದಲ್ಲಿ ಗುಲ್ಬರ್ಗದಲ್ಲಿ ರಂಗಾಯಣ ಘಟಕ ಉದ್ಘಾಟಿಸಿ ರಂಗ ಶಿಕ್ಷಣ ಪಡೆದ ಹೈ.ಕ. ಅನೇಕ ಯುವ ರಂಗ ಮಿತ್ರರಿಗೆ ಮತ್ತು ಹಿರಿಯ ರಂಗಕರ್ಮಿಗಳಿಗೆ ರಂಗಸೇವೆ ಸಲ್ಲಿಸಲು ಅವಕಾಶ ಮಾಡುವುದರ ಮೂಲಕ ಇಲ್ಲಿಯ ರಂಗಭೂಮಿ ಸಂಸ್ಕೃತಿಗೆ ತೋರಣಕಟ್ಟಿ ಈ ಭಾಗದ ರಂಗಾಸಕ್ತರಿಗೆ- ರಂಗಪೋಷಕರಿಗೆ ಚೈತನ್ಯ ಶಕ್ತಿಯಾಗಬೇಕೆಂದು ಮನವಿ ಮಾಡಿದ್ದಾರೆ.
ಪರಿಹಾರ ಕಲ್ಪಿಸಲು ಆಗ್ರಹ
ಗುಲ್ಬರ್ಗ: ಮಳೆ ಮತ್ತು ಕಸದ ಸಮಸ್ಯೆಯಿಂದ ತೊಂದರೆಗೀಡಾಗಿರುವ ನಾಗರಿಕರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಮುಂದಾಗಬೇಕೆಂದು ಗುಲ್ಬರ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್ ಕರೆ ನೀಡಿದರು. ನಗರದ ಉತ್ತರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಹಾಗೂ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಪಾಲಿಕೆ ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿ ಮಳೆ ಮತ್ತು ಕಸದಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಪಾಲಿಕೆ ಸದಸ್ಯರಾದ ಸೈಯದ್ ಅಹ್ಮದ್, ಮಾಜಿ ಮೇಯರ್ ಇಕ್ಬಾಲ್ ಸಿರ್ನಿಫರೋಶ ಮಾತನಾಡಿದರು. ವಿಜಯಕುಮಾರ, ರಹೀಮ್ ಮಿರ್ಚಿ, ಆದಿಲ್ ಸುಲೇಮಾನ್, ಸೈಯದ್ ಅಹ್ಮದ್, ಭೀಮರೆಡ್ಡಿ ಪಾಟೀಲ್, ರಾಜು ಕಪನೂರ, ರಫೀಕ್ ಖಾನ್, ಶಫಿ ಬಿಲ್ಡರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement