ಹೋಬಳಿಗಳಲ್ಲಿ ಪಹಣಿ ಕೇಂದ್ರಕ್ಕೆ ಒತ್ತಾಯ
ದೇವದುರ್ಗ: ಹೋಬಳಿಗೊಂದು ಪಹಣಿ ವಿತರಣೆ ಕೇಂದ್ರ ಪ್ರಾರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಒತ್ತಾಯಿಸಿದೆ. ಈ ಕುರಿತು ಗುರುವಾರ ಸಂಘಟನೆ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ತಾಲೂಕಿನಲ್ಲಿರುವ ನೆಮ್ಮದಿ ಕೇಂದ್ರಗಳಿಗೆ ಜನರೇಟರ್ ಅಳವಡಿಸಬೇಕು. ವಿದ್ಯುತ್ ತೊಂದರೆಯಿಂದ ರೈತರಿಗೆ ಪಹಣಿ, ಮಕ್ಕಳ ಅಭ್ಯಾಸಕ್ಕಾಗಿ ಜಾತಿ, ಆದಾಯ, ವಾಸಸ್ಥಳಗಳಂತಹ ಪ್ರಮಾಣ ಪತ್ರಗಳು ಸೂಕ್ತ ಸಮಯದಲ್ಲಿ ದೊರೆಯುತ್ತಿಲ್ಲ. ತೊಂದರೆಯಾಗಿದೆ ಎಂದು ಆರೋಪಿಸಿದರು. ಬಡ ಕೂಲಿಕಾರರಿಗೆ ಪಡಿತರ ಚೀಟಿ ನೀಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಬೂದಯ್ಯ ಸ್ವಾಮಿ ಗಬ್ಬೂರು, ನರಸಿಂಗರಾವ್ ಕುಲಕರ್ಣಿ, ಬಸವರಾಜ ಹೂವಿನಹೆಡ್ಗಿ, ಗುರುಲಿಂಗಪ್ಪ, ಶಿವನಗೌಡ ಹೂವಿನಹೆಡ್ಗಿ, ರಾಮನಗೌಡ ಗಣೇಕಲ್, ಪ್ರಭಾಕರ ಇಂಗಳದಾಳ ಮತ್ತಿತರರಿದ್ದರು.