ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಮಗಾರಿ ಕಳಪೆ; ದಿಂಡುರುಳಿ ಪ್ರತಿಭಟನೆ ಎಚ್ಚರಿಕೆ

Rashmi Kasaragodu
Updated On : 29 Jun 2013, 11:17 am

ರಾಯಚೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಚತುಷ್ಪಥ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಡಾಂಬರು ಕಿತ್ತಿದೆ. ಶಾಸಕ್ರು ಅದನ್ನ ನೋಡಿಲ್ಲಂತ ಕಾಣ್ತದ. 15 ದಿನದಾಗ ಶಾಸಕರು ರೋಡ್ ಬಗ್ಗೆ ಕ್ರಮ ಕೈಗೊಳ್ಳದಿದ್ರ. ನನ್ ಕೈಲಿಯಂತೂ ನಡಿಲಿಕ್ಕಾಗಂಗಿಲ್ಲ.. ಅದರ ಬದ್ಲಿಗೆ ಶಾಸಕರ ಮನಿ ಮುಂದ ದಿಂಡುರುಳಿ ಪ್ರತಿಭಟಿಸ್ತೇನೆ.... ಹೀಗೆಂದವರು ಜನ ಸಂಗ್ರಾಮ ಪರಿಷತ್ ಪ್ರಮುಖ ರಾಘವೇಂದ್ರ ಕುಷ್ಟಗಿ. ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಚತುಷ್ಪಥ ರಸ್ತೆಯ ಕಾಮಗಾರಿ ತೀರಾ ಕಳಪೆಯಾಗಿದೆ. ಅನೇಕ ಕಡೆ ಡಾಂಬರು ಕಿತ್ತಿದೆ. ಶಾಸಕ ಡಾ. ಶಿವರಾಜ್ ಪಾಟೀಲ್ ಅದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ ಅವರು ಕಣ್ಣು ಹಾಯಿಸಿಲ್ಲ ಎಂದು ಆರೋಪಿಸಿದರು. ಮುಂದಿನ 15 ದಿನದಲ್ಲಿ ರಸ್ತೆಯ ದುಸ್ಥಿತಿಗೆ ಪ್ರತಿಯಾಗಿ ಶಾಸಕರು ಕ್ರಮ ಜರುಗಿಸದಿದ್ದರೆ, ಶಾಸಕರ ಮನೆ ಮುಂದೆ ದಿಂಡುರುಳುವ ಮೂಲಕ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಪದಾಧಿಕಾರಿಗಳ ಆಯ್ಕೆ
ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ಇಲ್ಲಿನ ರೈತ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಗೋಶಿ ದೊಡ್ಡ ಈರಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ವಿ. ವೆಂಕಟೇಶ, ಉಪಾಧ್ಯಕ್ಷರಾಗಿ ವಿಜಯಭಾಸ್ಕರ್, ಮಹ್ಮದ್ ಗೌಸ್, ಕೆ.ಭೀಮರೆಡ್ಡಿ, ಶರಣಬಸಪ್ಪ, ಸಹ ಕಾರ್ಯದರ್ಶಿಗಳಾಗಿ ನರಸಿಂಹಲು, ಶಿವಾಜಿ, ನರಸಪ್ಪ ಕಡೇಚೂರು, ಸಿದ್ದಪ್ಪಗಾರು ಗೋಪಿರೆಡ್ಡಿ, ಖಜಾಂಚಿಯಾಗಿ ಬಾಯಿದೊಡ್ಡಿ ತಿಮ್ಮಾರೆಡ್ಡಿ, ಸಹಾಯಕ ಖಜಾಂಚಿಯಾಗಿ ಶ್ರೀನಿವಾಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ, ಎಚ್. ಭೀಮರೆಡ್ಡಿ, ವೀರೇಶ್ ಮತ್ತು ವಿಜಯಕುಮಾರ್ ನೇಮಕಗೊಂಡಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.
ಸಸಿ ನೆಡುವ ಕಾರ್ಯಕ್ರಮ
ರಾಯಚೂರು: ನಗರದ ಜನಮಿತ್ರ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಇತ್ತೀಚೆಗೆ ಏಗನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಸ್ಥೆಯ ಕಾರ್ಯದರ್ಶಿ ಈರಣ್ಣ ಮಾತನಾಡಿದರು. ಶಾಲೆಯ ಮೈದಾನದಲ್ಲಿ ಈ ವೇಳೆ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಸುಜಾತಾ, ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ಸೇರಿ ಅನೇಕರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement