ಜು.3ರಂದು ಹೊಸಪೇಟೆಯಲ್ಲಿ ಸಭೆ
ರಾಯಚೂರು: ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿಕೆಗೆ ಸಂಬಂಧಿಸಿದ ಸಂಪುಟದ ಉಪ ಸಮಿತಿಯು ಜು.3ರಂದು ಹೊಸಪೇಟೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು ಹಾಗೂ ಹೋರಾಟಗಾರರ ಅಹವಾಲು ಸ್ವೀಕಾರ ಸಭೆ ಕರೆದಿದೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಪ್ರಕಟಣೆ ನೀಡಿದ್ದು, ಸಂಪುಟ ಉಪ ಸಮಿತಿಯು ಅಂದು ಮಧ್ಯಾಹ್ನ 12ರಿಂದ 2ರವರೆಗೆ ರಾಯಚೂರು ಜಿಲ್ಲೆಯ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಲಿದೆ ಎಂದು ತಿಳಿಸಿ, ಈ ಸಭೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.
ಇಂಗ್ಲಿಷ್ ವ್ಯಾಕರಣ ಉಚಿತ ತರಬೇತಿ
ರಾಯಚೂರು: ಮಹಾತ್ಮಾ ಗಾಂಧಿ ಸಾಮಾಜಿಕ ಸಂಘಟನೆಯಿಂದ ಬಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವ್ಯಾಕರಣ ತರಗತಿಗಳನ್ನು ಉಚಿತವಾಗಿ ನಡೆಸಿಕೊಡಲಾಗುತ್ತಿದೆ ಎಂದು ಸಂಘಟನೆಯ ಪ್ರಮುಖ ಶೇಖರ್ ಅರ್ಕಸಾಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಗರದ ಇನ್ಫ್ಯಾಂಟ್ ಜೀಸಸ್ ಶಾಲೆಯ ಬಳಿಯಿರುವ ಆಕ್ಸ್ಫರ್ಡ್ ಇಂಗ್ಲಿಷ್ ಲರ್ನಿಂಗ್ ಸೆಂಟರ್ ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಈ ತರಬೇತಿ ನೀಡಲಾಗುತ್ತಿದ್ದು, ಬಡವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಮನವಿ ಮಾಡಿದ್ದಾರೆ. ವಿವರಕ್ಕೆ ಶೇಖರ್ ಅರ್ಕಸಾಲಿ, ಮೊ. 98803 20473 ಸಂಪರ್ಕಿಸಬಹುದು.
ಮಾದರಿ ಕ್ಷೇತ್ರವೇ ಗುರಿ: ಶಾಸಕ
ಮುದಗಲ್: ಲಂಬಾಣಿ ತಾಂಡಾಗಳು ಅಭಿವೃದ್ಧಿಯಿಂದ ಹಿಂದುಳಿದಿದ್ದು ಪ್ರತಿ ರಂಗದಲ್ಲೂ ತಾಂಡಾಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಮಸ್ಕಿ ಮೀಸಲು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವದು ನನ್ನ ಮೂಲ ಗುರಿಯಾಗಿದೆ ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಎಂದು ಹೇಳಿದರು.
ಸಮೀಪದ ಜಕ್ಕೆರಮಡು ತಾಂಡಾದಲ್ಲಿ ಅಭಿನಂದನಾ ಸಮಾರಂಭದಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 2ನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಲು ಕಾರಣರಾದ ಕ್ಷೇತ್ರದ ಜನತೆಗೆ ನಾನು ಅಭಿನಂದನಾರ್ಹ. ಹಿಂದಿನ ಅವಧಿಯಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಶಾಶ್ವತ ಕುಡಿವ ನೀರಿನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ಬಸವಂತರಾಯ ಕುರಿ ಮಾತನಾಡಿದರು. ಮಸ್ಕಿ ಕಾಂಗ್ರೆಸ್ ಅಧ್ಯಕ್ಷ ಅಂದಾನೆಪ್ಪ ಗುಂಡಳ್ಳಿ, ಲಿಂಗಸ್ಗೂರು ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಚನ್ನಬಸನಗೌಡ ಕನ್ನಾಳ, ಶಿವಕುಮಾರ್ ಮಸ್ಕಿ, ಶರಣಬಸವ ಮಟ್ಟೂರು, ಕನ್ನಾಳ ಗ್ರಾಪಂ ಉಪಾಧ್ಯಕ್ಷ ಅಮರೇಶ ಜಕ್ಕೇರಮುಡು, ವೀರನಗೌಡ ಪಾಟೀಲ್ ಇದ್ದರು.
ಜಿಪಂ ಸ್ಥಾಯಿ ಸಮಿತಿಗೆ ನೇಮಕ
ರಾಯಚೂರು: ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ. ಸ್ಥಾಯಿ ಸಮಿತಿಗೆ ನೇಮಕಗೊಂಡವರ ವಿವರ ಇಂತಿದೆ.
ಹಣಕಾಸು ಲೆಕ್ಕ ಪರಿಶೋಧನಾ ಮತ್ತು ಯೋಜನಾ ಸ್ಥಾಯಿ ಸಮಿತಿ: ಲಲಿತಮ್ಮ ಲಿಂಗರಾಜು- ಅಧ್ಯಕ್ಷರು, ಅಚ್ಯುತರೆಡ್ಡಿ, ಶಾಂತಮ್ಮ ಅಮರೇಗೌಡ, ಮಹಾದೇವಪ್ಪಗೌಡ, ಜಾಫರ ಅಲಿ ಪಟೇಲ್, ಉಮಾದೇವಿ, ಪುಷ್ಪಾ ಮುರಾರಿ- ಸದಸ್ಯರು.
ಸಾಮಾನ್ಯ ಸ್ಥಾಯಿ ಸಮಿತಿ: ಕೆ.ಶರಣಪ್ಪ- ಅಧ್ಯಕ್ಷ, ಬಸಮ್ಮ ಕುಂಟೋಜಿ, ರಾಣಿ ಜಯಲಕ್ಷ್ಮಿ, ಬೂಪನಗೌಡ ಪಾಟೀಲ್, ಶಿವಣ್ಣ ತಾತಾ, ಪ್ರಕಾಶ ಪಾಟೀಲ್, ತನ್ವೀರ್ ಬಷಿರುದ್ದೀನ್- ಸದಸ್ಯರು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ: ಹನುಮೇಶ ಮದ್ಲಾಪೂರ- ಅಧ್ಯಕ್ಷ, ಪದ್ಮಾವತಿ ಅಯ್ಯನಗೌಡ, ಜಿ. ಗಂಗಣ್ಣ, ಅಸ್ಲಂ ಪಾಷಾ, ಶರಣಬಸವ ನಾಯಕ, ಚಂದೂಸಾಬ ಮುಳ್ಳೂರು, ಗೋವಿಂದಮ್ಮ, ಮಲ್ಲೇಶ ನಾಯಕ- ಸದಸ್ಯರು.
ಸಾಮಾಜಿಕ ನ್ಯಾಯ ಸಮಿತಿ: ಪದ್ದಮ್ಮ ಅಬಕಾರಿ- ಅಧ್ಯಕ್ಷೆ, ಎಚ್.ಬಿ. ಮುರಾರಿ, ಕಮಲಾಕ್ಷಮ್ಮ ಷಣ್ಮುಖಪ್ಪ, ಹರ್ಷ ಪಾಟೀಲ್, ಅನಿತಾ ಹನುಮಂತ್ರಾಯ, ಸರೋಜಮ್ಮ ಬಸವರಾಜ, ಗೋಪಾಲ ನಾಯಕ- ಸದಸ್ಯರು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ: ಮೀನಾಕ್ಷಮ್ಮ- ಅಧ್ಯಕ್ಷೆ, ವಿಶ್ವನಾಥ ಪಾಟೀಲ, ಇಂದಿರಮ್ಮ ಕನ್ನಾರಿ, ಶಾಂತಮ್ಮ , ದಾನಪ್ಪ ಆಲ್ಕೋಡ್, ದುರ್ಗಮ್ಮ ನಾಯಕ, ಶಿವನಗೌಡ ಎಲೆಕೂಡ್ಲಗಿ- ಸದಸ್ಯರು.