ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬುಲೆಟ್ ಪಾಯಿಂಟ್ನಲ್ಲಿ ಸಾರಾಂಶ ಸಂಗ್ರಹಿಸಲು ಅಧಿಕಾರಿಗಳ ನೇಮಕಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.28ಜುಲೈ 1ರ ಬೆಳಗ್ಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂಬಂಧಪಟ್ಟಂತೆ ಭಾರತ ಸಂವಿಧಾನ 371ಜೆ ತಿ

Rashmi Kasaragodu
Updated On : 29 Jun 2013, 11:17 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಜೂ.28
ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳುವುದರಿಂದ ದೈನಂದಿನ ಜೀವನದಲ್ಲಿ ಎಸಗುವ ತಪ್ಪುಗಳನ್ನು ತಿದ್ದಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ ಅಭಿಪ್ರಾಯಪಟ್ಟರು.
ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಅರಿವಿನಿಂದ ಆರ್ಥಿಕವಾಗಿಯೂ ಲಾಭ ಸಾಧ್ಯ. ಉದಾರಣೆಗೆ ಎಲೆಕ್ಟ್ರೀಕಲ್ ಅಥವಾ ಗ್ಯಾಸ್ ಸ್ಟವ್ಗಳನ್ನು ಯಾವ ರೀತಿ ಬಳಸಿದರೆ ಹೆಚ್ಚು ಲಾಭದಾಯಕವಾಗಿ ಪರಿಣಮಿಸುತ್ತದೆ. ಅಧಿಕ ನೀರು ವ್ಯಯವಾಗದಂತೆ ಟಾಯ್ಲೆಟ್ ಫ್ಲಷ್ ಮಾಡುವ ವಿಧಾನ, ಶುದ್ಧ ನೀರನ್ನು ಬಳಸುವುದು, ಪ್ರತಿ ಮನೆಯಲ್ಲಿಯೂ ನೀರನ್ನು ಅಪವ್ಯಯವಾಗದಂತೆ ತಡೆಗಟ್ಟುವಂತಹ ವೈಜ್ಞಾನಿಕ ವಿಧಾನಗಳನ್ನು ಅರಿತುಕೊಂಡಾಗ ನೀರು ಉಳಿತಾಯವಾಗಿ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸದು. ಇದಕ್ಕೆ ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಕಿವಿಮಾತು: ಮಕ್ಕಳು ಇದನ್ನು ಚಿಕ್ಕನಿಂದಲೇ ರೂಢಿಸಿಕೊಳ್ಳಬೇಕು. ಇದಕ್ಕಾಗಿ ಉತ್ತಮವಾಗಿ ಅಭ್ಯಾಸ ಮಾಡಬೇಕು. ಯಾವುದೇ ಸಮಸ್ಯೆ ಉದ್ಭವವಾದಾಗ ಅದಕ್ಕೆ ಪರಿಹಾರ ಕಂಡುಕೊಳ್ಳುವ ಛಾತಿಯನ್ನು ಬೆಳೆಸಿಕೊಳ್ಳಬೇಕೆಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಂತಿ ಮೆಡಿಕಲ್ ಸೆಂಟರ್ನ ನಿರ್ದೇಶಕ ಡಾ. ಗುರುರಾಜ ಕುಲಕರ್ಣಿ ಮಾತನಾಡಿ, ಮಾನವ ತನ್ನ ಮೆದುಳಿನ (ಎಡ ಹಾಗೂ ಬಲಭಾಗದ ಮೆದುಳು) ಸಂಪೂರ್ಣ ಉಪಯೋಗ ಮಾಡಿಕೊಂಡಲ್ಲಿ ಸದಾ ಚಟುವಟಿಕೆಯಿಂದಿರಲು ಸಾಧ್ಯ. ಅಲ್ಲದೆ ಅದನ್ನು ರೂಢಿಸಿಕೊಳ್ಳುವ ಉತ್ತಮ ಹವ್ಯಾಸಗಳು ಅವನಿಗೆ ಮತ್ತಷ್ಟು ಮಾನಸಿಕ ಹಾಗೂ ದೈಹಿಕ ಬಲ ನೀಡುತ್ತವೆ. ದೈಹಿಕ ವ್ಯಾಯಾಮ ಹಾಗೂ ಮೆಡಿಟೇಷನ್ಗಳು ಮಾನವನಿಗೆ ಅತ್ಯುಪಯುಕ್ತ ಸಾಧನಗಳಾಗಿ ಪರಿಣಮಿಸಿವೆ ಎಂದರು.
ವಿಜ್ಞಾನ ಕ್ವಿಜ್ ಸ್ಪರ್ಧೆ: ಈ ಬಾರಿಯ ಜಿಲ್ಲಾ ಮಟ್ಟದ ವಿಜ್ಞಾನ ಕ್ವಿಜ್ ಸ್ಪರ್ಧೆಯನ್ನು ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. (ಯಾದಗಿರಿಯಿಂದ 5 ತಂಡಗಳು ಭಾಗವಹಿಸಿದ್ದವು) ಎರಡು ಜಿಲ್ಲೆಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಪ್ರೌಢಶಾಲೆಯ 147 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ಮಾಧ್ಯಮದ 24 ಶಾಲೆಯ ವಿದ್ಯಾರ್ಥಿಗಳು ಹಾಗೂ ಇಂಗ್ಲಿಷ್ ಮಾಧ್ಯಮದ 25 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕ್ವಿಜ್ ಕಾರ್ಯಕ್ರಮದಲ್ಲಿ ಪ್ರತಿ ಶಾಲೆಯ 3 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಕ್ವಿಜ್ ವಿವಿಧ ಸ್ಪರ್ಧೆಗಳ ವಿವರ ಇಂತಿದೆ. ಲಿಖಿತ ಎಲಿಮಿನೇಷನ್ ಸುತ್ತು, ಫನ್ ಸೈನ್ಸ್ ಕುರಿತು ವೈಜ್ಞಾನಿಕ ಶೋ, ಉಪನ್ಯಾಸ ಹಾಗೂ ಸಾಮಾನ್ಯ ವಿಜ್ಞಾನ ಕುರಿತ ಹೊರಾಂಗಣ ರಸಪ್ರಶ್ನೆಯ ಸ್ಪರ್ಧೆಗಳು ಜರುಗಿದವು.
ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ ಇತರರು ಇದ್ದರು. ಕೇಂದ್ರದ ಶೈಕ್ಷಣಿಕ ಅಧಿಕಾರಿ ಆರ್. ವೆಂಕಟೇಶ್ವರಲು ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement