ರಾಂಪುರಕ್ಕೆ ನೀರು; ನಿಷೇಧಾಜ್ಞೆ ಜಾರಿ
ರಾಯಚೂರು: ನಗರಕ್ಕೆ ಕುಡಿಯುವ ನೀರೊದಗಿಸುವ ರಾಂಪುರ ಜಲಾಶಯಕ್ಕೆ ಗಣೇಕಲ್ ಜಲಾಶಯದಿಂದ ನೀರು ಭರ್ತಿ ಮಾಡಿಕೊಳ್ಳಲು ಜೂ. 29ರಿಂದ ಎಡದಂಡೆ ಕಾಲುವೆಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ನಾಗರಾಜು ಅವರು ಆದೇಶ ಹೊರಡಿಸಿದ್ದು, ನೀರಿನ ಪೋಲಾಗುವಿಕೆ ತಡೆದು ರಾಂಪುರ ಜಲಾಶಯದ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಗಣೇಕಲ್ ಜಲಾಶಯದಿಂದ ಕಾಲುವೆಯ ಮಾರ್ಗದಲ್ಲಿರುವ 95ರಿಂದ 100ನೇ ವಿತರಣೆ ಕಾಲುವೆವರೆಗೆ ರೈತರು ಕೃಷಿ ಸಾಗುವಳಿಗಾಗಿ ನೀರು ಬಳಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಜೂ. 29ರಿಂದ ಜು.5ರ ವರೆಗೆ ಆದೇಶ ಜಾರಿಯಲ್ಲಿರಲಿದ್ದು, ಕಾಲುವೆಯ ಎಲ್ಲ ತೂಬುಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.