ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ
ಸಿಂಧನೂರು: ಉತ್ತರಖಂಡದ ಭೀಕರ ಜಲಪ್ರವಾಹದ ಸಂತ್ರಸ್ತರಿಗೆ ತಾಲೂಕಿನ ಮನುಜಮತ ಬಳಗದಿಂದ ಜೂ.29ರಂದು ಪರಿಹಾರ ನಿಧಿ ಸಂಗ್ರಹಿಸಲಾಗುವುದು. ನಾಗರಿಕರು ಸಂತ್ರಸ್ತರಿಗೆ ನೆರವು ನೀಡಿ ಸಹಕರಿಸಲು ಮನುಜಮತ ಬಳಗದ ತಾಲೂಕು ಅಧ್ಯಕ್ಷ ಡಿ.ಎಚ್.ಕಂಬಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಮನವಿ ಮಾಡಿದ್ದಾರೆ.