ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಿರಿಯ ನ್ಯಾಯವಾದಿ ಅರಾಳಗೌಡರ್ ನಿಧನ

Rashmi Kasaragodu
Updated On : 29 Jun 2013, 11:14 am

ಸಿಂಧನೂರು: ಹಿರಿಯ ನ್ಯಾಯವಾದಿ ಎಸ್.ಎಸ್.ಅರಾಳಗೌಡರ್ ಕೊನೆಯುಸಿರೆಳೆದರು. ಅವರಿಗೆ ಸುಮಾರು 60ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಮರಮ್ಮ, ಪುತ್ರರಾದ ವಿಶ್ವನಾಥರೆಡ್ಡಿ, ಬಸವರಾಜ, ಕಾಶಿನಾಥ, ಸೊಸೆ ಶಶಿಕಲಾ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಗಂಗಾವತಿ ತಾಲೂಕಿನ ಸಂಕನಾಳದಲ್ಲಿ ಜರುಗಿತು.
ಅರಾಳಗೌಡರ್ 1979ರಲ್ಲಿ ಮಾಜಿ ಶಾಸಕರಾಗಿದ್ದ ನ್ಯಾಯವಾದಿ ಗದ್ರಟಗಿ ಅಮರೇಗೌಡರ ಬಳಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ನಂತರ ಹಿರಿಯ ನ್ಯಾಯವಾದಿ ಎಸ್.ಬಿ. ಹಿರೇಗೌಡರ್ ಬಳಿ ವಕೀಲ ವೃತ್ತಿ ನಡೆಸಿದರು. ಸುಮಾರು 33ವರ್ಷಗಳ ಕಾಲ ವಕೀಲ ವೃತ್ತಿಯನ್ನು ನಡೆಸಿ ಅನೇಕ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಅರಾಳಗೌಡರ ನಿಧನದ ಸುದ್ದಿ ಕೇಳುತ್ತಿದ್ದಂತೆ ನ್ಯಾಯವಾದಿಗಳ ಸಂಘದಲ್ಲಿ ಸಂಘದ ಅಧ್ಯಕ್ಷ ಕೆ.ಭೀಮನಗೌಡ ತುರ್ತು ಸಭೆ ನಡೆಸಿ ಮೃತರ ಆತ್ಮಕ್ಕೆ ಹಾಜರಿದ್ದ ಸದಸ್ಯರು ಶಾಂತಿ ಕೋರಿದರು. ಹಿರಿಯ ನ್ಯಾಯವಾದಿಗಳಾದ ಗದ್ರಟಗಿ ವಿರುಪಾಕ್ಷಪ್ಪ, ಎಂ.ಅಮರೇಗೌಡ, ಬಸವರಾಜ ಗುಡದೂರು, ವಕೀಲರ ಸಂಘದ ಕಾರ್ಯದರ್ಶಿ ಹನುಮೇಶ ಕೊಡ್ಲಿ, ಖಜಾಂಚಿ ಸುರೇಶರೆಡ್ಡಿ ಮೃತರ ಅಂತಿಮ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement