ಇನ್ನರ್ ವ್ಹೀಲ್ ಕ್ಲಬ್ಗೆ ಆಯ್ಕೆ
ರಾಯಚೂರು: ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ನ ನೂತನ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಗಿದೆ.ಕ್ಲಬ್ಗೆ ಅಧ್ಯಕ್ಷರಾಗಿ ಸುಷ್ಮಾ ಪತಂಗೆ ಹಾಗೂ ಕಾರ್ಯದರ್ಶಿಯಾಗಿ ಅರ್ಚನಾ ಪಾಧ್ಯೆ ಅವರು ಆಯ್ಕೆಯಾಗಿದ್ದು, ಜೂ.30 ರಂದು ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಇವರು ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಇನ್ನರ್ ವ್ಹೀಲ್ ಕ್ಲಬ್ ಪ್ರಕಟಣೆ ತಿಳಿಸಿದೆ.
ಪದಗ್ರಹಣ ಸಮಾರಂಭ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜೂ.30ರಂದು ಇನ್ನರ್ ವ್ಹೀಲ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯ ಮುಖ್ಯಗುರು ಕುಪೇಂದ್ರ, ರೋಟರಿ ಸಂಸ್ಥೆಯ ಡಾ. ಗೌತಮ್ ಜಹಾಗೀರದಾರ್, ಇಂದಿರಾ ಕಲ್ಯಾಣಕಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.