ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಜೆಟ್ನಲ್ಲಿ ಸ್ಲಂ ನಿವಾಸಿಗಳಿಗೆ ಮನ್ನಣೆ ನೀಡಿ

Rashmi Kasaragodu
Updated On : 30 Jun 2013, 12:26 pm

ರಾಯಚೂರು: ರಾಜ್ಯದಲ್ಲಿನ ಸ್ಲಂ ನಿವಾಸಿಗಳ ಜನಸಂಖ್ಯೆಯ ಆಧರಿಸಿ ಬಜೆಟ್ನಲ್ಲಿ ಪಾಲು ನಿಗದಿಗೊಳಿಸಬೇಕು. ಕೊಳಗೇರಿಗಳ ನಿವಾಸಿಗಳಿಗೆ ಭೂಮಿ ಹಕ್ಕು ಖಾತ್ರಿಗೊಳಿಸಿ ಸಾಮಾಜಿಕ ನ್ಯಾಯ ದೊರಕಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶನಿವಾರ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರ ಇಷ್ಟರಲ್ಲಿಯೇ ಮಂಡಿಸಲಿರುವ ಬಜೆಟ್ನಲ್ಲಿ 2011ರ ಜನಗಣತಿ ಆಧರಿಸಿ ಸ್ಲಂ ನಿವಾಸಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸಬೇಕೆಂದು ಆಗ್ರಹಿಸಿದರು.
ಭೂಮಿ ಹಕ್ಕನ್ನು ನೀಡಿ: ಸ್ಲಂ ನಿವಾಸಿಗಳಿಗೆ ಮೀಸಲಿಟ್ಟ ಅನುದಾನದ ಸಮರ್ಪಕ ಬಳಕೆ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಸಚಿವಾಲಯವನ್ನು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲುದ್ದೇಶಿಸಿರುವ ರಾಜೀವ್ ಆವಾಸ್ ಯೋಜನೆಯಲ್ಲಿ ಭೂಮಿ ಹಕ್ಕನ್ನು ನೀಡಿ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿರುವ ಕೊಳಗೇರಿ ನಿವಾಸಿಗಳ ಪುನಾವಸತಿಗೆ ಭೂಸ್ವಾಧೀನ ಕೈಗೊಳ್ಳಲು ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಬಜೆಟ್ನಲ್ಲಿ 500 ಕೋಟಿ ಮೀಸಲಿಡಬೇಕು. ಮೂಲಸೌಲಭ್ಯ ಕಲ್ಪಿಸಲು 500 ಕೋಟಿ ಹಣ ಒದಗಿಸುವಂತೆ ಅವರು ಆಗ್ರಹಿಸಿದರು.
ಬಜೆಟ್ನಲ್ಲಿ ಹಣ ಮೀಸಲಿರಿಸಿ: ಈಚೇಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸದಂತೆ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಬಜೆಟ್ನಲ್ಲಿ ಹಣ ಮೀಸಲಿರಿಸಿ ಎಲ್ಲ ಕೊಳೆಗೇರಿ ನಿವಾಸಿಗಳಿಗೆ ಭೂಮಿಯ ಹಕ್ಕು ನೀಡಬೇಕೆಂದು ಒತ್ತಾಯಿಸಿದರು.
ಕೊಳೆಗೇರಿ ನಿವಾಸಿಗಳಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ವಿಧವೆಯರಿಗೆ, ವಿಕಲಚೇತನರಿಗೆ, ವಯೋವೃದ್ಧರಿಗೆ ಹಾಗೂ ಕೊಳೆಗೇರಿಯಲ್ಲಿರುವ ನಿರ್ಗತಿಕರಿಗೆ ಮಾಸಿಕ 3ಸಾವಿರ ಭತ್ಯೆ ನೀಡಬೇಕು. ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಹಣ ಮೀಸಲಿರುಸುವಂತೆ ಆಗ್ರಹಿಸಿದರು.
ಕೊಳೆಗೇರಿ ನಿವಾಸಿಗಳನ್ನು ಯಶಸ್ವಿನಿ ಯೋಜನೆ ಒಳಪಡಿಸಬೇಕು. ಈಗಾಗಲೇ ಕೊಳೆಗೇರಿ ನಿವಾಸಿಗಳಿಗೆ ನಿರ್ಮಾಣ ಮಾಡಿ ಆಶ್ರಯ ಮನೆಗಳು ಮತ್ತು ವಾಲ್ಮೀಕಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ನಿರ್ಮಾಣವಾಗಿರುವ ಮನೆಗಳಸಾಲ ಮನ್ನಾವನ್ನು ಬಜೆಟ್ನಲ್ಲಿ ಘೋಷಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ತಾಯಣ್ಣ ಹೊಸೂರು, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ, ಕೆ.ಪಿ. ಅನಿಲ್ ಕುಮಾರ್, ಚಂದ್ರಶೇಖರ್ ಯಕ್ಲಾಸಪುರ, ಬಿ.ಆಂಜಿನೇಯ್ಯ, ಎಸ್.ಹುಲಿಗೆಪ್ಪ, ಶ್ರೀಶೈಲರೆಡ್ಡಿ, ಜಂಬಯ್ಯ, ತಿಮ್ಮಾರೆಡ್ಡಿ, ನೂರ್ ಜಾನ್, ಮಂಜುಳಾ, ಯಲ್ಲಮ್ಮ, ಲಕ್ಷ್ಮಿ, ಶರಣಮ್ಮ, ಸುರೇಶ್ ಗೌಡ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement