'ಕೋಟೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ'
ಮುದಗಲ್: ಮುದಗಲ್ ಐತಿಹಾಸಿಕ ಕೋಟೆ ರಮಣಿಯವಾಗಿದೆ. ಕೋಟೆ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಇದರ ಇತಿಹಾಸ ತಿಳಿಯಲು ರಕ್ಷಣೆ ಮಾಡುವುದು ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ನಾಗರಾಜ ಹೇಳಿದರು. ಭಾನುವಾರ ಐತಿಹಾಸಿಕ ಕೋಟೆ ವಿಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮುದಗಲ್ ಕೋಟೆ ರಕ್ಷಣೆಗೆ ಮತ್ತು ಜೀರ್ಣೋದ್ಧಾರಕ್ಕಾಗಿ ಸರ್ಕಾರಕ್ಕೆ ವರದಿ ಕಳಿಸಲು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಏಕಕಾಲಕ್ಕೆ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಯೋಚಿಸಲಾಗುತ್ತಿದೆ ಎಂದರು. ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಕಳಿಸಲಾಗುತ್ತದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಶಾಸಕರು, ಸಂಬಂಧಪಟ್ಟ ಸಚಿವರ, ಮುಖ್ಯಮಂತ್ರಿಗಳಿಗೆ ಒತ್ತಡ ತಂದು ಹಣ ಮಂಜೂರು ಮಾಡಿಸಿದಲ್ಲಿ ಇಂತಹ ಐತಿಹಾಸಿಕ ಸ್ಥಳಗಳನ್ನು ರಕ್ಷಣೆ ಮಾಡಲು ಸಾಧ್ಯ. ಕೋಟೆ ಉತ್ಸವ ನಡೆಸಲು ಸಹಾಯಕ ಆಯುಕ್ತರಿಗೆ ರೂಪರೇಷಗಳನ್ನು ತಯ್ಯಾರಿಸಲು ಸೂಚಿಸಲಾಗುತ್ತದೆ. ಪಟ್ಟಣದ ಎಲ್ಲಾ ಜನಾಂಗದ ಮುಖಂಡರ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದರು.
ಪಟ್ಟಣದ ಫತೆ ದರ್ವಾಜಾ, ಹೋಕ್ರಾಣಿ, ಮುಳ್ಳ ಅಗಸಿ, ಸೇರಿದಂತೆ ಅನೇಕ ಸ್ಥಳಗಳನ್ನು ಪರಿಶೀಲಿಸಿದರು. ಸಹಾಯಕ ಆಯುಕ್ತ ಯೋಗೇಶ್ವರ, ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ, ಮುಖಂಡರಾದ ಸುರೇಶಗೌಡ, ರಾಮಣ್ಣ ಹಿರೇಮನಿ, ಡಾ.ಬಸವರಾಜ,ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.