ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಸಸಿ ನೆಡುವ ಪ್ರೀತಿ ಬೆಳೆಯಲಿ'

Mainashree
Updated On : 1 Jul 2013, 11:05 am

ಸಿಂಧನೂರು:  ಮಕ್ಕಳಲ್ಲಿ ಪರಿಸರ ಪ್ರೇಮ ಹಾಗೂ ಹಸಿರು ಕಾಳಜಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ರೈತನಗರ ಕ್ಯಾಂಪ್‌ನ ತಾಯಿ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಗೆ ರಾಯಚೂರಿನ ಜಿಲ್ಲಾ ವಿಶೇಷ ಪೊಲೀಸ್ ಠಾಣೆ ವತಿಯಿಂದ ಸಸಿಗಳನ್ನು ದಾನ ಮಾಡಿದರು. ಶಾಲೆಗೆ ಸಸಿಗಳನ್ನು ದಾನ ಮಾಡಿದ ಪೊಲೀಸ್ ಠಾಣೆಯ ಸಿ.ಪಿ.ಐ.ಶರಣಪ್ಪ ಹಿಪ್ಪರ್ಗಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಬೆಳೆಯಲು ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಇರುವುದರ ಜೊತೆಗೆ ಕಾನೂನಿನ ಅರಿವನ್ನು ಹೊಂದಬೇಕು. ಉತ್ತಮ ಪರಿಸರ ನಿರ್ಮಾಣಕ್ಕೆ ಸಸಿಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ವಾತಾವರಣ ಶುದ್ಧವಾಗಿರುವುದಲ್ಲದೆ ಸರಿಯಾದ ಪ್ರಮಾಣದಲ್ಲಿ ಮಳೆಯನ್ನು ನಿರೀಕ್ಷಿಸಿಬಹುದು ಎಂದರು.
ಶಾಲಾ ಆಡಳಿತ ಮಂಡಳಿಯ ಸದಸ್ಯ ಶಂಕರರೆಡ್ಡಿ, ಶಾಲಾ ಮುಖ್ಯಗುರು ಕೆ.ರಾಜೇಂದ್ರ, ಪೊಲೀಸ್ ಸಿಬ್ಬಂದಿಗಳಾದ ಎಚ್.ಸಿ. ಹುಲಿಯಪ್ಪ, ಪೇದೆಗಳಾದ ಮಹೆಬೂಬ, ರವಿ, ಬಸವರಾಜ, ಶಿಕ್ಷಕರಾದ ಸತ್ಯನಾರಾಯಣ ರೆಡ್ಡಿ, ಯನಮಪ್ಪ, ಅಮೀನುದ್ದೀನ್, ಕ್ಯಾಂಪಿನ ನಿವಾಸಿಗಳು ಉಪಸ್ಥಿತರಿದ್ದರು.
ಮೊದಲಿಗೆ ಕವಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಜಗದೀಶ ಸ್ವಾಗತಿಸಿದರು. ಶಿಕ್ಷಕ ಭೀಮನಾಯಕ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ಹನುಮರೆಡ್ಡಿ ವಂದಿಸಿದರು. ದಾನ ಮಾಡಿದ 150ಕ್ಕೂ ಹೆಚ್ಚು ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement