ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಹಕ್ಕುಗಳ ಬಗ್ಗೆ ಜಾಗೃತರಾಗಲು ಸಲಹೆ'

Mainashree
Updated On : 1 Jul 2013, 11:05 am

ರಾಯಚೂರು: ಆರೋಪಿಗಳಿಗೂ ಜನಸಾಮಾನ್ಯರಂತೆ ಬದುಕುವ ಹಕ್ಕಿದೆ. ಆರೋಪಿತರು ತಮ್ಮ ಹಕ್ಕುಗಳ ಕುರಿತು ಮಾಹಿತಿ ಹೊಂದಲು ಹಾಗೂ ಪ್ರತಿಯೊಬ್ಬ ಆರೋಪಿಗೂ ತಮ್ಮ ತಮ್ಮ ಸುಧಾರಣೆ ಕಡೆಗೆ ಗಮನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಸತೀಶ್ ಸಿಂಗ್ ಕರೆ ನೀಡಿದರು.
ಈಚೇಗೆ ಜಿಲ್ಲಾ ಕಾರಾಗೃಹ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆರೋಪವನ್ನು ಕೊಡು ಕೊಳ್ಳುವಿಕೆ ಹಾಗೂ ರಾಜಿಯಾಗುವ ಪ್ರಕರಣ ಕುರಿತ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಾಧೀಶರಾದ ಮಹ್ಮದ ಮುಜಾಯಿದುಲ್ಲಾ, ಪ್ರತಿಯೊಬ್ಬ ಆರೋಪಿ ತಮ್ಮ ಪರವಾಗಿ ವಾದ ಮಂಡಿಸಲು ವಕೀಲರ ನೇಮಕಕ್ಕೆ ಆರ್ಥಿಕ ತೊಂದರೆಯಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ನ್ಯಾಯವಾದಿಗಳನ್ನು ನೇಮಿಸಲಾಗುತ್ತದೆ ಎಂದು ತಿಳಿಸಿದರು.ನ್ಯಾಯವಾದಿಗಳ ಸಂಘದ ಖಜಾಂಚಿ ಕೆ.ಸಿ. ವೀರೇಶ್ ಮಾತನಾಡಿ, ಆರೋಪಿಗಳು ದುಷ್ಚಟಗಳಿಂದ ದೂರವಿರಲು ಕರೆ ನೀಡಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಬಸನಗೌಡ ಜಂಬಲದಿನ್ನಿ, ಅತ್ತಾವುಲ್ಲಾ ಗಾರಲದಿನ್ನಿ ವಕೀಲರು ಮಾತನಾಡಿದರು.ನಂತರ ಆರೋಪಿಗಳು ಸಮಸ್ಯೆಗಳ ಕುರಿತು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜೆ. ಸತೀಶ್ ಸಿಂಗ್ ಅವರ ಜತೆ ಸಂವಾದ ನಡೆಸಿದರು. ಡಾ. ಐ.ಜೆ. ಮ್ಯಾಗೇರಿ, ಸಂಘದ ಅಧ್ಯಕ್ಷ ರಾಜಾ ಪಾಂಡುರಂಗ ನಾಯಕ, ವಕೀಲರಾದ ಶಂಕರಗೌಡ ನಾಡಗೌಡ, ಸಹನಾ ಹಿರೇಮಠ, ನಂದಾ ದೇಶಪಾಂಡೆ, ಹನುಮಂತಪ್ಪ ತುರುಕನದೋಣಿ, ಎಸ್.ಎಸ್. ಹಿರೇಮಠ ಪ್ರಾಚಾರ್ಯರು ಹಾಗೂ ಕಾರಾಗೃಹದ ವೈದ್ಯಾಧಿಕಾರಿ ಡಾ. ಪ್ರಾಣೇಶ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement