24 ಗಂಟೆ ಸೇವಾ ಕೇಂದ್ರ
ರಾಯಚೂರು: ಇಲ್ಲಿನ ನಗರಸಭೆಯಲ್ಲಿ 24 ಗಂಟೆಗಳ ನಿರಂತರ ಸೇವಾ ಕೇಂದ್ರವನ್ನು ಸಾರ್ವಜನಿಕರ ಕುಂದುಕೊರತೆ ಆಲಿಸಲು ತೆರೆಯಲಾಗಿದೆ ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಈ ಕುರಿತು ಪೌರಾಯುಕ್ತ ಮಂಜುನಾಥ ಅವರು ಪ್ರಕಟಣೆ ನೀಡಿ, ನಗರಸಭೆಗೆ ಸಂಬಂಧಿಸಿದ ದೂರುಗಳು, ರಸ್ತೆ, ಸ್ವಚ್ಛತೆ, ನೀರು ಸರಬರಾಜು, ಬೀದಿ ದೀಪಗಳು ಇತ್ಯಾದಿ ದೂರುಗಳನ್ನು ದೂ. 08532- 234913 ಅಥವಾ ವೆಬ್‌ಸೈಟ್ ವಿಳಾಸ- ಢಿಢಿಢಿ.್ಠಝ್ಝ್ಛ್ಡ್ಠ.್ಛ್ಝಡಿಣ.್ಜ್ಟಢ.್ಝಟಿಗೆ ಸಲ್ಲಿಸಬಹುದು. ದೂರು ನಿರ್ವಹಣೆ ನಂತರ ದೂರು ನೀಡಿದವರಿಗೆ ಅದರ ಮಾಹಿತಿ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.