ನೀತಿ ಸಂಹಿತೆ ಗಾಳಿಗೆ ತೂರಿದ್ರೂ ಕ್ರಮವಿಲ್ಲ...
ಕನ್ನಡಪ್ರಭ ವಾರ್ತೆ, ಔರಾದ್, ಮಾ. 2: ಪಟ್ಟಣ ಪಂಚಾಯತ್ ಚುನಾವಣೆ ನಿಮಿತ್ತ ವಿವಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಪ್ರಚಾರ ನಡೆಸುತ್ತಿರುವದನ್ನು ಪಟ್ಟಣದಲ್ಲಿ ಕಾಣಬಹುದು.
ಪ್ರಚಾರ, ಸಂಚಾರ: ಪಟ್ಟಣದ ವಾರ್ಡ್ ಸಂ 2, 3, 7, 9 ಹಾಗೂ13ರಲ್ಲಿ ಪಕ್ಷದ ಚಿನ್ಹೆಗಳುಳ್ಳ ಧ್ವಜ ಹಾಗೂ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದು ಇಲ್ಲಿ ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘಿಸಿದಂತಾಗಿದೆ.
ಅಲ್ಲದೆ ಕೆಲ ವಾಹನಗಳು ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಆಯಾ ಪಕ್ಷದ ಚಿನ್ಹೆಯುಳ್ಳ ಧ್ವಜಗಳನ್ನು ಕಟ್ಟಿಕೊಂಡು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಂತೆ ಕಾಣುತ್ತದೆ.
ತಡರಾತ್ರಿಯಾದರೂ ನೀತಿ ಸಂಹಿತೆ ಉಲ್ಲಂಘಿಸಿ ವಾರ್ಡ್ಗಳಲ್ಲಿ ಗುಂಪು ಗುಂಪಾಗಿ ಅಭ್ಯರ್ಥಿಗಳು ಭರಾಟೆಯ ಪ್ರಚಾರ ಮಾಡುತ್ತಿದ್ದರೂ ಇದಕ್ಕೆ ಕಡಿವಾಣ ಹಾಕಬೇಕಿರುವ ಚುನಾವಣಾ ಅಧಿಕಾರಿಗಳು ಯಾಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.