ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೂತನ ವಿದ್ಯಾ ಸಂಸ್ಥೆಗೆ 11ರ ಸಂಭ್ರಮ

Mainashree
Updated On : 3 Mar 2013, 12:27 pm

ಕ.ಪ್ರ. ವಾರ್ತೆ, ಸಿಂಧನೂರು, ಮಾ.2
ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದು ಇಂದಿನ ದಿನಗಳಲ್ಲಿ ಕಷ್ಟಕರ. ಆದರೆ ಆರಂಭಿಸಿರುವ ಶಿಕ್ಷಣ ಸಂಸ್ಥೆ ಯಾವುದೇ ಕಾರಣಕ್ಕೂ ಮುಚ್ಚಬಾರದು. ನಿರ್ದೇಶಕರು ರಾಜೀನಾಮೆ ನೀಡಬಾರದು. ಶಿಕ್ಷಣ ಸಂಸ್ಥೆ ಸರಸ್ವತಿಯ ಮಂದಿರ. ಅದಕ್ಕೆ ಅದರದೇ ಆದ ಪಾವಿತ್ರ್ಯತೆ ಇದೆ. ಅದರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ವೆಂಕಟನಾಥ ಸುವಿದ್ಯಾ  ಗುರುಕುಲದ ಕುಲಪತಿ ಹಾಗೂ ಮಂತ್ರಾಲಯ ಮಠದ ಪೀಠಾಧಿಪತಿ ಸುವಿದ್ಯೇಂದ್ರ ತೀರ್ಥರು ಹೇಳಿದರು.
ಅವರು ನೂತನ ಹಿರಿಯ ಪ್ರಾಥಮಿಕ ಶಾಲೆಯ ಹನ್ನೊಂದರ ಸಂಭ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಹನ್ನೊಂದರ ಸಂಭ್ರಮದಲ್ಲಿರುವ ನೂತನ ವಿದ್ಯಾ ಸಂಸ್ಥೆ ಚಿರನೂತನವಾಗಿರಲಿ. ಅದು ಮುಂಬರುವ ದಿನಗಳಲ್ಲಿ ಪ್ರೌಢಶಾಲೆ, ಕಾಲೇಜುಗಳನ್ನು ಆರಂಭಿಸಲಿ. ಸ್ವಂತ ಜಾಗ ಹಾಗೂ ಕಟ್ಟಡ ಹೊಂದಲಿ ಎಂದು ಶುಭ ಹಾರೈಸಿದರು.
ಗುರುಭಕ್ತಿ ಎಲ್ಲಿ?: ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಭಾಪುರಿ ಖಾಸಾ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಮಾತನಾಡಿ, ಕೃತಯುಗ, ದ್ವಾಪರಯುಗ, ತ್ರೈತಾಯುಗಗಳಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ಮೂಲಕ ಪಾಠಗಳನ್ನು ಆಸಕ್ತಿ ಮೂಡಿಸುತ್ತಿದ್ದರು. ಆಗ ಶಿಷ್ಯಂದರಲ್ಲಿ ಗುರುಭಕ್ತಿ ಅಚಲವಾಗಿತ್ತು. ಈಗ ಗುರುಭಕ್ತಿಯೂ ಇಲ್ಲ. ಶಿಕ್ಷಕರ ಭಯವು ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಡೆತಡೆಯಿಲ್ಲದ ಶಿಕ್ಷಣ ಸಂಸ್ಥೆಗಳು: ನಿವೃತ್ತ ಪ್ರಾಚಾರ್ಯ ಹಾಗೂ ಸಂಶೋಧಕ ಪ್ರೊ. ಶಾಶ್ವತಯ್ಯಸ್ವಾಮಿ ಮುಕುಂದಿಮಠ ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ರಮಾದೇವಿ ಶಂಭೋಜಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ ಕುಲಕರ್ಣಿ, ಪ್ರಹ್ಲಾದ ಯುವಕ ಮಂಡಳದ ಸಂಚಾಲಕ ರಾಮಕೃಷ್ಣಾಚಾರ್ಯ ಗೋನವಾರ, ನೂತನ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ವೆಂಕಣ್ಣಾಚಾರ್ಯ ದೊಟಿಹಾಳ, ಕನ್ನಡ ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ನೂತನ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಆರ್.ವಿ.ಜೋಶಿ ವಹಿಸಿದ್ದರು. ಮನೋಹರರಾವ ಕುಲಕರ್ಣಿ ನಿರೂಪಿಸಿದರು, ವೆಂಕಟೇಶ ಕೆಂಗಲ್ ಸ್ವಾಗತಿಸಿದರು. ಜಿ.ವಿ. ಜೋಶಿ ವಂದಿಸಿದರು. ನಂತರ ವಿದ್ಯಾಥರ್ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  
ಸನ್ಮಾನ: ಸುವಿದ್ಯೇಂದ್ರತೀರ್ಥ ಶ್ರೀಗಳು, ಸೋಮನಾಥ ಶಿವಾಚಾರ್ಯರು, ನೂತನ ವಿದ್ಯಾ ಸಂಸ್ಥೆಯ ಮುಖ್ಯಗುರುಗಳಾಗಿದ್ದ ರೇಣುಕಾ ಕುಲಕರ್ಣಿ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement