ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಚಿವ ಲಿಂಬಾವಳಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ

Mainashree
Updated On : 3 Mar 2013, 12:27 pm

ರಾಯಚೂರು: ಸ್ಥಳೀಯ ನಗರಸಭೆಗೆ ಮಾ. 7ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ನಗರದ ವಿವಿಧೆಡೆ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಚುನಾವಣೆ ಪ್ರಚಾರ ನಡೆಸಿದರು.
ನಗರದ ಮಡ್ಡಿಪೇಟೆ, ಮಕ್ತಲ್ ಪೇಟೆ ಸೇರಿದಂತೆ 24, 25, 26ನೇ ವಾರ್ಡುಗಳಲ್ಲಿ ಮತದಾರರ ಮನೆಗೆ ತೆರಳಿದ ಅವರು, ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಘುನಾಥರಾವ್ ಮಲ್ಕಾಪುರೆ, ಮಾಜಿ ಶಾಸಕ ಪಾಪಾರೆಡ್ಡಿ, ಪ್ರಮುಖರಾದ ತ್ರಿವಿಕ್ರಮ್ ಜೋಷಿ, ಅಶೋಕ ಗಸ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಬಂಡೇಶ್ ವಲ್ಕಂದಿನ್ನಿ, ಗಿರೀಶ ಕನಕವೀಡು ಇದ್ದರು.
ಸಿಂಧನೂರು ವರದಿ: ಸಚಿವ ಅರವಿಂದ ಲಿಂಬಾವಳಿ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡ್ಗಳಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ವಾರ್ಡ್ ನಂ.19ರಲ್ಲಿ ಎಂ. ರಾಮಕೋಟೇಶ್ವರ ರಾವ್, ವಾರ್ಡ್ ನಂ.16ರಲ್ಲಿ ಎಂ. ವಿಜಯ್, ವಾರ್ಡ್  ನಂ. 21ರಲ್ಲಿ ಖಾಸೀಂಸಾಬ್, ವಾರ್ಡ್ ನಂ. 22ರಲ್ಲಿ ಹನುಮೇಶ್, 14ನೇ ವಾರ್ಡ್ನಲ್ಲಿ ಲಕ್ಷ್ಮೀ ಪರವಾಗಿ ಮತದಾರರಲ್ಲಿ ಮತಯಾಚಿಸಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಜಿಲ್ಲಾ ಕಾರ್ಯದರ್ಶಿ ಶೇಷಗಿರಿರಾವ್ ಕೊಲ್ಲಾ, ತಾಲೂಕು ಅಧ್ಯಕ್ಷ ಅಮರೇಗೌಡ ವಿರುಪಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವನಗೌಡ ಗೊರೇಬಾಳ, ಉಮೇಶ್ ಸಜ್ಜನ್, ದೇವೆಂದ್ರಪ್ಪ ಯಾಪಲಪರ್ವಿ , ಹನುಮೇಶ್ ಹರೆಟನೂರ್, ಶಿವಬಸನಗೌಡ, ಮಧ್ವರಾಜ್, ಕಲಮಂಗಿ ಅಮರೇಗೌಡ ಇನ್ನಿತರರು ಸಚಿವರಿಗೆ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement