ತಾಲೂಕು ಮಟ್ಟದ ನಲಿ-ಕಲಿ ಯಶಸ್ವಿ
ರಾಯಚೂರು: ತಾಲೂಕು ಮಟ್ಟದ ನಲಿ-ಕಲಿ ಶಿಕ್ಷಕರ ಸಂವಾದ ಕಾರ್ಯಕ್ರಮವನ್ನು ಇತ್ತೀಚೆಗೆ ನಗರದ ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಡಯಟ್ ಪ್ರಾಚಾರ್ಯ ಎನ್.ಕೆಂಚೇಗೌಡ ಉದ್ಘಾಟಿಸಿ, ಭಯರಹಿತ ವಾತಾವರಣ, ವಾತ್ಸಲ್ಯಪೂರಿತ ಕಲಿಕಾ ಪರಿಸರ ತರಗತಿಗಳಲ್ಲಿ ಮೂಡಿಸುವ ನಿಟ್ಟಿನಲ್ಲಿ ನಲಿ ಕಲಿ ಕಾರ್ಯಕ್ರಮ ಸಹಾಯಕಾರಿ ಎಂದು ತಿಳಿಸಿದರು.
ಬಿಇಒ ಮಲ್ಲಿಕಾರ್ಜುನ ಮಾತನಾಡಿ, ಗುಣಾತ್ಮಕ ಶಿಕ್ಷಣದ ಗುರಿ ತಲುಪುವ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿರುವ ಎಲ್ಲ ಶಿಕ್ಷಕರು ಎಷ್ಟರಮಟ್ಟಿಗೆ ಪರಿಶ್ರಮ ಮತ್ತು ಪ್ರಯತ್ನ ನಡೆಸುತ್ತಿದ್ದೇವೆಂಬುದು ಸಂವಾದ ಕಾರ್ಯಕ್ರಮದಲ್ಲಿ ಅವಲೋಕಿಸಬೇಕಿದೆ. ಆ ಮೂಲಕ ಪ್ರಗತಿಯ ಪರಿಶೀಲನೆ ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಯರಮರಸ್ ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಸುಖದೇವ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಲೆಯ ಫಾದರ್ ರೆ.ಜಯರಾಜ್ ಪುಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಡಯಟ್ನ ಉಪನ್ಯಾಸಕ ವೈ.ಎನ್. ಗಾಡ್ಗೋಳ, ಟಿ.ವಿ. ಚಂದ್ರಪ್ರಕಾಶ್, ಯು.ನರಸಿಂಹಲು ಮತ್ತಿತರರು ಇದ್ದರು.