ನಾಳೆ ಡಿಇಸಿ ಮಾತ್ರೆಗಳ ಉಚಿತ ವಿತರಣೆ
ಸಿಂಧನೂರು: ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ 9ನೇ ಸುತ್ತಿನ ರಾಷ್ಟೀಯ ಆನೆಕಾಲು ರೋಗ ನಿಯಂತ್ರಣ ಅಡಿಯಲ್ಲಿ ಉಚಿತ ಡಿಇಸಿ ಮಾತ್ರೆಗಳ ವಿತರಣಾ ಕಾರ್ಯಕ್ರಮವು ಮಾ.5ರಂದು ತಾಲೂಕಿನಾದ್ಯಂತ ಜರುಗುವುದು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ ತಿಳಿಸಿದ್ದಾರೆ.
2 ವರ್ಷದಿಂದ 5 ವರ್ಷ ವಯಸ್ಸಿನವರಿಗೆ 1 ಮಾತ್ರೆ, 6-14 ವಯಸ್ಸಿನವರಿಗೆ 2 ಮಾತ್ರೆ, 15 ವರ್ಷ ಮೇಲ್ಪಟ್ಟವರಿಗೆ 3 ಮಾತ್ರೆ ವಿತರಿಸಲಾಗುವುದು. ಜೊತೆಗೆ ಪ್ರತಿಯೊಬ್ಬರಿಗೂ ಒಂದು ಚೀಪಬಹುದಾದ ಅಲ್ಬೆಂಡಜೋಲ್ ಮಾತ್ರೆ ವಿತರಿಸಲಾಗುವುದು. ಇದರಿಂದ ಫೈಲೇರಿಯಾ ಜಂತುವಿನ ಜೊತೆಗೆ ಸಾಮಾನ್ಯ ಜಂತುಗಳನ್ನು ನಾಶ ಮಾಡವುದು ಎಂದು ತಿಳಿಸಿದರು. ಮಾತ್ರೆಗಳನ್ನು ತಪ್ಪದೇ ಊಟ ಮಾಡಿದ ನಂತರ ಸೇವಿಸಬೇಕೆಂದು ತಿಳಿಸಿದರು.