ಶ್ರೀರಾಮುಲು ಚುನಾವಣಾ ಪ್ರಚಾರ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಮಾ.4
ಸ್ಥಳೀಯ ಪುರಸಭೆ ಚುನಾವಣೆ ನಿಮಿತ್ಯ ಬಿಎಸ್‌ಆರ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಹಾಗೂ ಪಕ್ಷದ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ ಅವರು ಸೋಮವಾರ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಚುನಾವಣಾ ಪ್ರಚಾರ ಸಭೆ ನಡೆಸಿದರು.
ಪಟ್ಟಣಕ್ಕೆ ಚಿತ್ರನಟಿ ಪೂಜಾಗಾಂಧಿ ಅವರು ಆಗಮಿಸಲಿದ್ದಾರೆಂಬ ಸುದ್ದಿ ತಿಳಿದ ಜನತೆ ಅವರು ಬರುವಿಕೆಯ ಹಾದಿಯನ್ನು ಕಾಯುತ್ತಾ ಸುಮಾರು ಮೂರು ಗಂಟೆ ಕಾಲಕಾದು ಕುಳಿತಿದ್ದರು. ಮಧ್ಯಾಹ್ನ 3 ಗಂಟೆಗೆ ಹೆಲಿಕಾಪ್ಟರ್ ಆಗಮಿಸುತ್ತಿದ್ದಂತೆ ಚಿತ್ರನಟಿ ಪೂಜಾ ಗಾಂಧಿ ಆಗಮಿಸುವ ನಿರೀಕ್ಷೆಯಲ್ಲಿದ್ದ ಜನತೆಯಲ್ಲಿ ನಿರಾಶೆ ಮೂಡಿಸಿತು. ಪಕ್ಷದ ರಾಜ್ಯಾಧ್ಯಕ್ಷ ಶ್ರೀರಾಮುಲು, ಸಂಸದ ಫಕೀರಪ್ಪ ಮಾತ್ರ ಆಗಮಿಸಿದರು.
ಮೂಲಭೂತ ಸೌಕರ್ಯ ಭರವಸೆ: ನಂತರ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುತ್ತಾ ಪಪೂ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯ ವೇದಿಕೆಗೆ ಕರೆತರಲಾಯಿತು. ನಂತರ ಮಾತನಾಡಿದರು. ಸಂಸದ ಎಸ್. ಫಕೀರಪ್ಪ, ಪಕ್ಷದ ಹಿರಿಯ ಮುಖಂಡ ಕೆ.ವಿರುಪಾಕ್ಷಪ್ಪ, ಪಕ್ಷದ ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ, ಅಬುರೆಹಮಾನ, ಮಸ್ಕಿ ನಿಯೋಜಿತ ಅಭ್ಯರ್ಥಿ ಶೇಖರಪ್ಪ ತಳವಾರ ಮುಖಂಡರಾದ ಹನುಮಂತಪ್ಪ ಕಂದಗಲ್, ಜಿ.ಜಿ. ನಾಯಕ, ವೆಂಕಟರಾವ ಜಾಗೀರದಾರ, ಶಾಂತಪ್ಪ ಆನ್ವರಿ, ಅಮರೇಶ ಮಡ್ಡಿ, ರಾಜಶೇಖರ ಪಾಟೀಲ್ ಇದ್ದರು.