ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ'

Lingaraj Badiger
Updated On : 5 Mar 2013, 10:54 am

ಸಿಂಧನೂರು: ಸ್ಥಳೀಯ ನಗರಸಭೆ ವಾರ್ಡ್ 11ರ ನಟರಾಜ ಕಾಲೋನಿಯಲ್ಲಿ ಎಲ್ಲ ಸಮುದಾಯದ ಜನತೆಗೆ ಉಪಯೋಗವಾಗುವ ಸಮುದಾಯ ಭವನ ಹಾಗೂ ನಟರಾಜ ದೇವಸ್ಥಾನದ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಭುರಾಜ ಭರವಸೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಾರ್ಡ್ ನಂ.11ರಲ್ಲಿ 20 ಫೀಟ್ ಅಗಲದ ರಸ್ತೆಗಳಲ್ಲಿ ಮೊದಲು ಚರಂಡಿ ನಿರ್ಮಿಸಿ ರಸ್ತೆ ಉಳಿಸುವ ಹಾಗೂ ಒಂದು ಮಗ್ಗುಲಲ್ಲಿ ಸಸಿ ನೆಡುವ ಕಾರ್ಯಕ್ರಮ, 30 ಫೀಟ್ ರಸ್ತೆಗಳಲ್ಲಿ ಚರಂಡಿಗಳನ್ನು ನಿರ್ಮಿಸಿ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿ ಎರಡೂ ಮಗ್ಗಲುಗಳಲ್ಲಿ ಸಸಿಗಳನ್ನು ನೆಟ್ಟು ಇಡೀ ವಾರ್ಡ್ ಹಸಿರುಮಯ ಮಾಡುವ ಉದ್ದೇಶ ಹೊಂದಿದ್ದೇನೆಂದು ಹೇಳಿದರು.
ಯುಜಿಡಿ ಕಾಮಗಾರಿ ಪ್ರಾರಂಭವಾಗುತ್ತಿದ್ದಂತೆ ತಮ್ಮ ವಾರ್ಡಿನ ಎಲ್ಲ ಬಡಾವಣೆಗಳಲ್ಲಿ ಒಳಚರಂಡಿಗಳು, ರಸ್ತೆಗಳ ಮೆಟಲಿಂಗ್, ಡಾಂಬರೀಕರಣ, ಕಾಂಕ್ರೀಟ್ ರಸ್ತೆಯಂತೆ ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನಗಳಿಗೆ ಅರ್ಜಿ ಹಾಕಿದವರಿಗೆ ಸಹಾಯ ಮಾಡಿ ವೇತನ ಕೊಡಿಸುವುದು, ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸಲು ಸಹಾಯ ಮಾಡುವುದು, ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸುವುದು ಸೇರಿದಂತೆ ಕಾರ್ಯಕ್ರಮ ಜಾರಿಗೊಳಿಸುವ ಉದ್ದೇಶವಿದೆ ಎಂದು ಆಸ್ವಾಸನೆ ನೀಡಿದರು.
ಈ ಹಿಂದೆ ಈ ವಾರ್ಡ್‌ನಲ್ಲಿ ಪ್ರಾಥಮಿಕ ಶಾಲಾ ಕಟ್ಟಡ, ಅಂಗನವಾಡಿ, ಹೆಣ್ಣುಮಕ್ಕಳ ಶೌಚಾಲಯಗಳಿಗೆ ಹಣ ಬಿಡುಗಡೆ ಮಾಡಿಸಲಾಗಿತ್ತು. ಆದರೆ ಸರ್ಕಾರಿ ನಿವೇಶನಗಳು ನಿಗದಿತ ಸಮಯದಲ್ಲಿ ಸಿಗದಿದ್ದರಿಂದ ಆ ಹಣ ವಾಪಸ್ಸು ಹೋಗಿದೆ. ಪುನಃ ಆ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement