ಇಂದಿನಿಂದ ಹುಲಿಗೆಮ್ಮ ಜಾತ್ರೆ
ಸುರಪುರ: ಪಟ್ಟಣದ ಭೋವಿಗಲ್ಲಿಯ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಬುಧವಾರದಿಂದ ಆರಂಭವಾಗಲಿದೆ. ದೇವಿಯು ಗಂಗಾ ಸ್ಥಳಕ್ಕೆ ಶೆಳ್ಳಗಿ ಹತ್ತಿರದ ಕೃಷ್ಣಾ ನದಿಯ ಬಳಿಯಿರುವ ಮಂಟಪಕ್ಕೆ ತೆರಳಿ, ಮಾ.7ರಂದು ಗುಡಿಗೆ ಆಗಮನವಾಗಲಿದೆ. ಪಲ್ಲಕ್ಕಿ ಮೆರವಣಿಗೆ, ಮಾ.8ರಂದು ಪಾಯಸ ತಿರುವುದು, ಅಗ್ನಿಕೊಂಡ ತುಳಿಯಲಾಗುವುದು. 11ರಂದು ದೇವಿ ಗರ್ಭ ಗುಡಿ ಪ್ರವೇಶದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಅರ್ಚಕ ಹುಲಿಗಪ್ಪ ತಿಳಿಸಿದ್ದಾರೆ.