ಪರಿಸರ ಮಿತ್ರ ಪ್ರಶಸ್ತಿ ಪ್ರದಾನ
ರಾಯಚೂರು: ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಪಂ ಸಿಇಒ ಜ್ಞಾನಪ್ರಕಾಶ್ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಡಾ.ಎಂ.ಕೆ.ನಾಯಕ್, ಬಿ.ಎಸ್. ಗೋಪಾಲಕೃಷ್ಣ ಸಣತಂಗಿ, ಡಿಡಿಪಿಐ ಪರಮೇಶ್ವರ್, ಪರಿಸರ ಇಲಾಖೆಯ ಅಧಿಕಾರಿ ದಿನೇಶ್ ಸೇರಿದಂತೆ ಅನೇಕರಿದ್ದರು.
ಈ ವೇಳೆ ಹೈ.ಕ. ಭಾಗದ ಆರು ಜಿಲ್ಲೆಗಳಲ್ಲಿ ವಿಜ್ಞಾನ ಬೋಧನೆ ಕ್ಷೇತ್ರದಲ್ಲಿ ಸಾಧನೆ ಮೆರೆದ ಶಿಕ್ಷಕರಿಗೆ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.