ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೃತ್ತಿ ನಿರತರಿಗೆ ಸನ್ಮಾನ; ಮೆಚ್ಚುಗೆ

Lingaraj Badiger
Updated On : 6 Mar 2013, 11:09 am

ರಾಯಚೂರು: ವಸತಿ, ಊಟದ ವ್ಯವಸ್ಥೆಯಿರುವ ಮಹಿಳಾ ಹಾಸ್ಟೆಲ್ ನಿರ್ಮಿಸುವ ಆರ್ಯವೈಶ್ಯ ಅಧಿಕಾರಿಗಳ ಸಂಘದ ಯೋಜನೆ ಶ್ಲಾಘನೀಯ ಕಾರ್ಯವಾಗಿದೆ. ಮಹಿಳೆಯರನ್ನು ಗೌರವದಿಂದ ಕಾಣುವುದು ನಮ್ಮ ಸಂಸ್ಕೃತಿಯಾಗಿದ್ದು, ಎಲ್ಲರೂ ಪಾಲಿಸಬೇಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕ್ರಪ್ಪ ಹೇಳಿದರು. ಅವರು ಈಚೆಗೆ ಆರ್ಯವೈಶ್ಯ ಗೀತಾ ಮಂದಿರದಲ್ಲಿ ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘದಿಂದ ಆಯೋಜಿಸಿದ್ದ 32ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ವಾಣಿಜ್ಯೋದ್ಯಮ ಸಂಘದ ಉಪಾಧ್ಯಕ್ಷ ಬಿ.ಜಗದೀಶ ಗುಪ್ತಾ,  ವಾಸವಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಆರ್.ರಾಮಚಂದ್ರ ಶೆಟ್ಟಿ, ಆರ್ಯವೈಶ್ಯ ಸಮಾಜದ ಸಹಕಾರ್ಯದರ್ಶಿ ಎಂ.ಆರ್. ವೀರಣ್ಣ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾಯಚೂರು ರೈಸ್ ಮಿಲ್ಲರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಮಾರಂ ತಿಪ್ಪಣ್ಣ ಶೆಟ್ಟಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ. ಗೋವಿಂದ, ಗಂಜ್ ಕಲ್ಯಾಣ ಮಂಟಪದ ಕಾರ್ಯದರ್ಶಿ ಜಟ್ರಂ ವೆಂಕಟೇಶ, ಕನ್ನಿಕಾ ಪರಮೇಶ್ವರಿ ಹಾಸ್ಟೆಲ್ ಸಮಿತಿ ಕೋಶಾಧ್ಯಕ್ಷ ಸಾವಿತ್ರಿ ಶಶಿಭೂಷಣ್ ಇದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿ ನಿರತರ ಸಂಘದ ಅಧ್ಯಕ್ಷ ದೇವಗಾರಿ ಸತೀಶ ಕುಮಾರ್ ವಹಿಸಿದ್ದರು. ಜವಳಗೇರಾ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಗೊಂಡ ರಾಧಾ ರವಿಕುಮಾರ್ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಣ್ಣ ಮುದಗಲ್, ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯ ಗಾಣದಾಳ ಲಕ್ಷ್ಮೀಪತಿ ಮತ್ತು ಸೇವೆಯಿಂದ ನಿವೃತ್ತರಾದ ಕೆ. ಗಿರಿಧರ, ಕಾಶಿನಾಥ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement