18 ಬಾಕ್ಸ್ ಮದ್ಯ, 20 ಸೀರೆ ಜಪ್ತಿ
ರಾಯಚೂರು: ನಗರದ ವಿವಿಧೆಡೆ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ 18 ಬಾಕ್ಸ್ ಮದ್ಯ ಮತ್ತು 20 ಸೀರೆಗಳನ್ನು ಪೊಲೀಸರು ಬುಧವಾರ ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ನಗರದ 1ನೇ ವಾರ್ಡಿನ ರಾಮಾಂಜನೇಯ ನಗರದಲ್ಲಿ ಚರ್ಚ್ ಬಳಿ ಪೊದೆಯಲ್ಲಿ ಅಡಗಿಸಿಟ್ಟಿದ್ದ 11 ಬಾಕ್ಸ್ ವಿವಿಧ ಕಂಪನಿಗಳ ಮದ್ಯವನ್ನು ಪೊಲೀಸರು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ. ಅದೇ ರೀತಿ ನಗರದ ಎಪಿಎಂಸಿ ಬಳಿ ಮನೆಯೊಂದರಲ್ಲಿರಿಸಿದ್ದ 2 ಬಾಕ್ಸ್ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾಗೆಯೇ 22ನೇ ವಾರ್ಡಿನಲ್ಲಿ ಸಂಗ್ರಹಿಸಿಟ್ಟಿದ್ದ 5ಬಾಕ್ಸ್ ಮದ್ಯ ಜಪ್ತಿ ಮಾಡಲಾಗಿದೆ. ಇನ್ನು 24ನೇ ವಾರ್ಡಿನಲ್ಲಿ ಮಹಿಳೆಯರಿಗೆ ಹಂಚಲು ತಂದಿರಿಸಿದ್ದ 20 ಸೀರೆಗಳನ್ನು ಪೊಲೀಸರು ದಾಳಿ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಕುರಿತು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.
ಮದ್ಯ ಜಪ್ತಿ
ರಾಯಚೂರು: ನಗರಸಭೆ ಚುನಾವಣೆಯಲ್ಲಿ ಹಂಚಿಕೆ ಮಾಡಲು ನಗರದ ಕಾಳಿದಾಸ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ 80 ಬಾಟಲು ಮದ್ಯ ಜಪ್ತಿ ಮಾಡಲಾಗಿದೆ. ಬಡಾವಣೆಯ ಸುಂಕ್ಲಮ್ಮ ಎಂಬಾಕೆ ಮನೆಯಲ್ಲಿ ಅಕ್ರಮವಾಗಿರಿಸಿದ್ದ 80 ಬಾಟಲು ವಿವಿಧ ಕಂಪನಿಗಳ ಮದ್ಯವನ್ನು ಪೊಲೀಸರು ದಾಳಿ ಮಾಡಿ ಜಪ್ತಿ ಮಾಡಿದ್ದಾರೆ. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.