ಕಿರು ಕದನಕ್ಕೆ ಇಂದು ಮತದಾನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.6
ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾ.7ರಂದು ಮತದಾನ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಜಿಲ್ಲೆಯ ಪಾಲಿಕೆ, ನಗರ- ಪುರಸಭೆಗಳು, ಪಟ್ಟಣ ಪಂಚಾಯ್ತಿ ಸೇರಿದಂತೆ 8 ಸ್ಥಳೀಯ ಸಂಸ್ಥೆಗಳಲ್ಲಿನ 213 ಸ್ಥಾನಗಳಿಗೆ 5.12 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ.
ಮತಗಳ ಏಣಿಕೆ- ಮಾರ್ಚ್ 11ರಂದು(ಬೆ.8 ಗಂಟೆಯಿಂದ)
ಈ 8 ಸ್ಥಳೀಯ ಸಂಸ್ಥೆಗಳಲ್ಲಿ 5,12,442 ಮತದಾರರು ಇದ್ದು, ಈ ಪೈಕಿ 2,62,481 ಪುರುಷ ಮತದಾರರು ಹಾಗೂ 2,59,187 ಮಹಿಳಾ ಮತದಾರರು ತಮ್ಮ ಮತದಾನದ ಅಧಿಕಾರ ಚಲಾಯಿಸಲಿದ್ದಾರೆ. ಈ ವ್ಯವಸ್ಥೆಗಾಗಿ 537 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಗುಲ್ಬರ್ಗ ಪಾಲಿಕೆ ಮತಗಟ್ಟೆಗಳ ನೋಟ
ಒಟ್ಟು ಮತಗಟ್ಟೆಗಳು- 368
ಸೂಕ್ಷ್ಮ ಮತಗಟ್ಟೆಗಳು- 76
ಅತಿಸೂಕ್ಷ್ಮ ಮತಗಟ್ಟೆಗಳು- 49
ಸಹಾಯವಾಣಿ: ಮತದಾರರಿಗೆ ಏನಾದರೂ ಸಂದೇಹಗಳಿದ್ದು, ಪರಿಹಾರಕ್ಕೆ 5 ಲೈನ್ಗಳ ಸಾಮರ್ಥ್ಯದ ದೂ. 08472- 223322 ಕರೆ ಮಾಡಬಹುದು. ಇದರ ಜೊತೆಗೆ 7 ತ್ವರಿತ ಕಾರ್ಯಾಚರಣೆ ಪಡೆಗಳ ರೂಪದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಮತದಾನ ದಿನದ ಅಗತ್ಯಕ್ಕನುಗುಣವಾಗಿ ಈ ತಂಡಗಳು ಕೆಲಸ ಮಾಡಲಿವೆ.
ಅಪರಾಧ ಹಿನ್ನೆಲೆಯ 45 ಮಂದಿ ಕಣದಲ್ಲಿ: ಗುಲ್ಬರ್ಗ ಮಹಾನಗರ ಪಾಲಿಕೆಯ 55 ಸ್ಥಾನಗಳಿಗಾಗಿ 328 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಪೈಕಿ 45 ಜನ ವಿವಿಧ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಹೆಸರು ಪ್ರಸ್ತಾಪವಾದರೇ ಆಗಿದ್ದಾರೆ. ಇಂತಹ ಆತಂಕದ ಸಂಗತಿ ಜಿಲ್ಲೆಯ ಪೊಲೀಸ್ ನಡೆಸಿರುವ ವಿಶ್ಲೇಷಣೆಯಿಂದ ತಿಳಿದು ಬಂದಿದೆ.
ವಿಡಿಯೋ ಕಣ್ಣು: ಅತಿ ಸೂಕ್ಷ್ಮ ಮತಗಟ್ಟೆಗಳಿರುವ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಯ ಇಡೀ ಮತದಾನ ಪ್ರಕ್ರಿಯೆ ವಿಡಿಯೋ ಚಿತ್ರಣ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹೇಳಿದ್ದಾರೆ.
ಮತಗಟ್ಟೆಗಳ ಸಂಪೂರ್ಣ ವಿವರ
ಗುಲ್ಬರ್ಗ ಮಹಾನಗರ ಪಾಲಿಕೆ- 55 ವಾರ್ಡ್, ಕಣದಲ್ಲಿ 328 ಅಭ್ಯರ್ಥಿಗಳು, ಮತಗಟ್ಟೆಗಳು- 356, ಒಟ್ಟು ಮತದಾರರು-3,63,423(ಪು- 1,84,742, ಮ- 1,77,681)
ಶಹಾಬಾದ್ ನಗರಸಭೆ- 31 ವಾರ್ಡ್, ಕಣದಲ್ಲಿ 144 ಅಭ್ಯರ್ಥಿಗಳು- 35 ಮತಗಟ್ಟೆಗಳು(ಅಸೂ- 4, ಸೂ- 11), ಒಟ್ಟು ಮತದಾರರು 34,242(ಪು- 17,200, ಮ- 17,047)
ಚಿತ್ತಾಪುರ ಪುರಸಭೆ- 23 ವಾರ್ಡ್, 26 ಮತಗಟ್ಟೆಗಳು(ಅಸೂ- 3, ಸೂ- 6), ಕಣದಲ್ಲಿ 101 ಅಭ್ಯರ್ಥಿಗಳು, ಒಟ್ಟು ಮತದಾರರು- 20,141(ಪು- 10,072, ಮ- 10,068)
ಆಳಂದ ಪುರಸಭೆ- 23 ವಾರ್ಡ್, ಕಣದಲ್ಲಿ 101 ಅಭ್ಯರ್ಥಿಗಳು, 24 ಮತಗಟ್ಟೆಗಳು(ಅಸೂ- 4, ಸೂ- 8), 22,607(ಪು- 11,930, ಮ- 10,677)
ಸೇಡಂ ಪುರಸಭೆ- 23 ವಾರ್ಡ್, ಕಣದಲ್ಲಿ 103 ಅಭ್ಯರ್ಥಿಗಳು, 23 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು 21,763 (ಪು- 11,031, ಮ- 10,732)
ಚಿಂಚೋಳಿ ಪಪಂ- 18 ವಾರ್ಡ್ಗಳು, ಕಣದಲ್ಲಿ 93 ಅಭ್ಯರ್ಥಿಗಳು, 18 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು- 12,417(ಪು- 6,328, ಮ- 6,079)
ಅಫಜಲ್ಪುರ ಪಪಂ- 20 ವಾರ್ಡ್ಗಳು, ಕಣದಲ್ಲಿ 66 ಅಭ್ಯರ್ಥಿಗಳು, 20 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು- 17,626(ಪು- 9,118, ಮ- 8,445)
ಜೇವರ್ಗಿ ಪಪಂ- 20 ಸದಸ್ಯರು, ಕಣದಲ್ಲಿ 69 ಅಭ್ಯರ್ಥಿಗಳು, 20 ಮತಗಟ್ಟೆಗಳು(ಅಸೂ- 3, ಸೂ- 6), ಒಟ್ಟು ಮತದಾರರು- 13,601(ಪು- 6,730, ಮ- 6,871)
1 ಮಹಾನಗರ ಪಾಲಿಕೆ, 1 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯ್ತಿಗಳ ಒಟ್ಟು ವಾರ್ಡ್ಗಳು 213, ಕಣದಲ್ಲಿ 1033 ಅಭ್ಯರ್ಥಿಗಳು, ಒಟ್ಟು ಮತದಾರರು- 5,12,442(ಪು- 2,62,481, ಮ- 2,59,187)
ಒಟ್ಟು ಮತಗಟ್ಟೆಗಳು- 537
ಅತಿ ಸೂಕ್ಷ್ಮ- 71
ಸೂಕ್ಷ್ಮ- 133