ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪುಣ್ಯ ಕಾರ್ಯದಿಂದ ಸುಖಮಯ ಬದುಕು: ಮರಿಬಸವರಾಜ

Lingaraj Badiger
Updated On : 7 Mar 2013, 11:17 am

ಸಿಂಧನೂರು: ಪುಣ್ಯ ಕಾರ್ಯದಿಂದ ಮಾತ್ರ ಸುಖಮಯ ಬದುಕು ಸಿಗುತ್ತದೆ ಎಂದು ಉಟಕನೂರು ದೇಶಿಕೇಂದ್ರ ಮರಿಬಸವರಾಜ ಸ್ವಾಮಿಗಳು ಹೇಳಿದರು.
ತಾಲೂಕಿನ ಕುರುಕುಂದ ಗ್ರಾಮದಲ್ಲಿ ಬುಧವಾರ ಮರಿಬಸವಲಿಂಗ ತಾತನವರ ಪುಣ್ಯಾರಾಧನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸಂಪತ್ತು, ಒಡವೆ, ವಸ್ತ್ರಗಳಿಂದ ಸುಖ ಸಿಗುವುದಿಲ್ಲ. ಇದು ತಾತ್ಕಾಲಿಕವಾದ ಸುಖವನ್ನು ಕೊಡಬಹುದು. ಆದರೆ ಶಾಶ್ವತ ಸುಖ ಸಿಗುವುದು ಪುಣ್ಯದ ಕಾರ್ಯ ಮಾಡಿದಾಗ ಮಾತ್ರ. ಪ್ರೀತಿ, ವಿಶ್ವಾಸ, ಕರುಣೆಯನ್ನು ಎಲ್ಲರು ರೂಢಿಸಿಕೊಳ್ಳಬೇಕು. ತಾತನವರ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.
ಗೌಡನಬಾವಿ ನಾಗಪ್ಪತಾತ ಮಾತನಾಡಿ, ತಾತನವರಲ್ಲಿ ಅಚಲ ನಂಬಿಕೆ ಇಟ್ಟವರಿಗೆ ಪರಿಹಾರ ಸಿಕ್ಕಿದೆ. ಕೇವಲ ಉಗುಳಿನಿಂದ ತಾತ ಸಕಲ ರೋಗಗಳನ್ನು ನಿವಾರಣೆ ಮಾಡುತ್ತಿದ್ದರು. ಅವರ ಧ್ಯಾನ ನಾವೆಲ್ಲ ಮಾಡಬೇಕು. ಗುರುವಿನ ಮಾರ್ಗದರ್ಶನದಲ್ಲಿ ನಡೆದ ಸುಖವಾದ ಜೀವನ ನಡೆಸಬೇಕು ಎಂದರು.
ಬಿಜೆಪಿ ಯುವ ಮುಖಂಡ ಚೇತನ ಪಾಟೀಲ್, ಪ್ರವಚನಕಾರ ಶರಣಯ್ಯಶಾಸ್ತ್ರೀ, ಮೌನೇಶಕುಮಾರ, ಬಸಯ್ಯಸ್ವಾಮಿ ಹಿರೇಮಠ, ಶೇಖರಯ್ಯಸ್ವಾಮಿ ಹಿರೇಮಠ, ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.
ಶರಣಯ್ಯಸ್ವಾಮಿ ಹಿರೇಮಠ ನಿರೂಪಿಸಿ, ವಂದಿಸಿದರು. ರುದ್ರಾಭಿಷೇಕ ಮರಿಬಸವಲಿಂಗ ತಾತನವರ ಕರ್ತ ಗದ್ದುಗೆಗೆ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement