ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತಗಟ್ಟೆಗಳಲ್ಲಿ ಭಾರೀ ಪೊಲೀಸ್ ಬಿಗಿ ಭದ್ರತೆ

Lingaraj Badiger
Updated On : 7 Mar 2013, 11:10 am

ರಾಯಚೂರು: ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾ.7ರಂದು ನಡೆಯಲಿರುವ ಮತದಾನದ ಹಿನ್ನೆಲೆ ಜಿಲ್ಲಾದ್ಯಂತ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯ ಎರಡು ನಗರಸಭೆ, ಮೂರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಗೆ ನಡೆಯುವ ಚುನಾವಣೆಯನ್ನು ಶಾಂತಿ ಮತ್ತು ಸುಗಮವಾಗಿ ನಿರ್ವಹಿಸಲು ಪೊಲೀಸ್ ಇಲಾಖೆಯು ಅಗತ್ಯ ಕ್ರಮ ಕೈಗೊಂಡಿದೆ. ಮತದಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 366 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು ಅಗತ್ಯ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಈಗಾಗಲೇ ಒದಗಿಸಲಾಗಿದೆ.
366 ಮತಗಟ್ಟೆಗಳಲ್ಲಿ ಈಗಾಗಲೇ ಇಲಾಖೆಯು 175 ಸೂಕ್ಷ್ಮ, 153 ಅತೀ ಸೂಕ್ಷ್ಮ ಹಾಗೂ 38 ಮತಗಟ್ಟೆಗಳನ್ನು ಸಾಮಾನ್ಯ ಎಂದು ಗುರುತಿಸಿದ್ದು, ಮತದಾನದ ಸಂದರ್ಭದಲ್ಲಿ ಮೂರು ಉಸ್ತುವಾರಿ ಮೊಬೈಲ್ ದಳಗಳು, 8 ಸೂಪರ್ ವೈಸಿಂಗ್ ದಳಗಳು, 46 ಮೊಬೈಲ್ ದಳಗಳು ಸೇರಿ ಒಟ್ಟು 57 ಮೊಬೈಲ್‌ಗಳು ಮತದಾನದ ಬಿಗಿ ಭದ್ರತೆಯ ಮೇಲೆ ನಿಗಾ ಇರಿಸಲಿವೆ ಎಂದು ಚುನಾವಣೆ ವಿಭಾಗ ತಿಳಿಸಿದೆ.
ಅದೇ ರೀತಿ ಜಿಲ್ಲೆಯ ಮತದಾನ ಕಾರ್ಯದ ವೇಳೆ ಒಬ್ಬ ಎಎಸ್ಪಿ, ಇಬ್ಬರು ಡಿಎಸ್ಪಿಗಳು, 9 ಜನ ಸಿಪಿಐಗಳು, 31 ಜನ ಪಿಎಸ್ಸೈಗಳು, 65 ಎಎಸ್ಸೈಗಳು, 182 ಹೆಡ್ ಕಾನ್ಸಟೇಬಲ್‌ಗಳು, 593 ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಾಗೂ 370 ಜನ ಗೃಹ ರಕ್ಷಕದಳದ ಸಿಬ್ಬಂದಿ ಭದ್ರತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆಂದು ಪೊಲೀಸ್ ಇಲಾಖೆ ತಿಳಿಸಿದೆ.

ದೇವದುರ್ಗ; ಬಂದೋಬಸ್ತ್
ದೇವದುರ್ಗ: ಇಲ್ಲಿನ ಪುರಸಭೆಗೆ ಮಾ.7ರಂದು ನಡೆಯುವ ಚುನಾವಣೆಯ ಹಿನ್ನೆಲೆ ಪುರಸಭೆಯ 24 ಮತಗಟ್ಟೆಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆಂದು ಸಿಪಿಐ ಗಿರೀಶ್ ಭೋಜಣ್ಣನವರ್ ತಿಳಿಸಿದ್ದಾರೆ.
ಈಗಾಗಲೇ ಕೆಎಸ್ಸಾರ್ಪಿ ತುಕಡಿ, ಜಿಲ್ಲಾ ಮೀಸಲು ಪಡೆ, ಸೇರಿದಂತೆ ಇಬ್ಬರು ಸಿಪಿಐ, 6 ಜನ ಎಸ್ ಐ, 22 ಹೆಡ್ ಕಾನ್ಸ್‌ಟೇಬಲ್‌ಗಳು, 61 ಜನ ಪೊಲೀಸ್ ಕಾನ್ಸ್ ಟೇಬಲ್‌ಗಳು ಮತ್ತು 30ಜನ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪಟ್ಟಣದ 24 ಮತಗಟ್ಟೆಗಳ ಪೈಕಿ 6 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. ಇಂಥ ಮತಗಟ್ಟೆಗಳಲ್ಲಿ ಹೆಚ್ಚಿನ ಭದತ್ರೆ ಮಾಡಲಾಗಿದೆ. ಐದು ಮೊಬೈಲ್ ಪೊಲೀಸ್ ದಳಗಳು ಮತದಾನ ಶಾಂತಿಯುತವಾಗಿ ನಡೆಯಲು ಉಸ್ತುವಾರಿ ನಡೆಸಲಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement