ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಜ್ಞಾನಜ್ಯೋತಿ ಶಾಲೆ ವಾರ್ಷಿಕೋತ್ಸವ

Lingaraj Badiger
Updated On : 8 Mar 2013, 10:55 am

ಸಿಂಧನೂರು: ತಾಲೂಕಿನ ಅರಗಿನಮರ ಕ್ಯಾಂಪಿನಲ್ಲಿ ಮಾ.8ರಂದು ಜ್ಞಾನಜ್ಯೋತಿ ಪಬ್ಲಿಕ್ ಶಾಲೆಯ ಪ್ರಥಮ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ.ಕೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವಾರ್ಷಿಕೋತ್ಸವ ಸಾನಿಧ್ಯವನ್ನು ಸಿದ್ದರಾಮಾನಂದಪುರಿ ವಹಿಸುವರು. ಕನಕ ಗುರುಪೀಠದ ಗೌರವಾಧ್ಯಕ್ಷ ನಂಜುಂಡಯ್ಯ ಗುರುವಿನ ನೇತೃತ್ವ ವಹಿಸುವರು. ಶಾಸಕ ವೆಂಕಟರಾವ್ ನಾಡಗೌಡ ಉದ್ಘಾಟಿಸುವರು. ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗ್ಯಾನಪ್ಪ ಕನ್ನಾಪೇಟ ಅಧ್ಯಕ್ಷತೆ ವಹಿಸುವರು. ಬಿಎಸ್‌ಆರ್ ಪಕ್ಷದ ಮುಖಂಡ ಕೆ.ಕರಿಯಪ್ಪ ಬಹುಮಾನ ವಿತರಿಸುವರು. ಕನಕಗಿರಿಯ ಸಾಹಿತಿ ಅಲ್ಲಾಗಿರಿರಾಜ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಸಿಪಿಐ ಹೆಚ್.ಶೇಖರಪ್ಪ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ಶಾಲಾ ಕಟ್ಟಡವನ್ನು ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ ಉದ್ಘಾಟಿಸುವರು ಎಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿಇಓ ಜಿ.ಎಂ. ವೃಷಭೇಂದ್ರಯ್ಯಸ್ವಾಮಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಎಂ. ದೊಡ್ಡಬಸವರಾಜ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಭೀಮಣ್ಣ ಸಂಗಟಿ, ಕನಕಗುರುಪೀಠದ ಅಧ್ಯಕ್ಷ ಟಿ.ಹನುಮಂತಪ್ಪ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹುಸೇನಸಾಬ, ಅನಿಕೇತನ ಕಾಲೇಜಿನ ಪ್ರಾಚಾರ್ಯ ವೈ.ಎಚ್. ರಕ್ಕಸಗಿ, ಜಿಪಂ ಮಾಜಿ ಸದಸ್ಯ ಗಂಗಮ್ಮ ಕರಿಯಪ್ಪ ಸೇರಿದಂತೆ ಅರಗಿನಮರ, ಬಾಲಯ್ಯ ಕ್ಯಾಂಪಿನ ಗಣ್ಯರು ಪಾಲ್ಗೊಳ್ಳುವರು.
ಇದೇ ಸಂದರ್ಭದಲ್ಲಿ ತಾಲೂಕ ಆಡಳಿತದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಹ್ಲಾದ ಗುಡಿ, ಮಲ್ಲಪ್ಪ ಬಾದಲರ್, ವೀರೇಶ ಗೋನವಾರ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪ್ರೇಮಿಗಳು, ಪಾಲಕರು, ವಿದ್ಯಾರ್ಥಿಗಳು ಆಗಮಿಸಬೇಕೆಂದು ಕೋರಿದ್ದಾರೆ.


ಆಕಸ್ಮಿಕ ಬೆಂಕಿ: ಹಾನಿ
ರಾಯಚೂರು: ತಾಲೂಕಿನ ಯರಗೇರಾ ಗ್ರಾಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ಆಸ್ತಿ ಸುಟ್ಟು ನಾಶವಾಗಿದೆ. ಗ್ರಾಮದ ಭೀಮಯ್ಯ ಎಂಬುವವರಿಗೆ ಸೇರಿದ ಮನೆಯಲ್ಲಿ ರಾತ್ರಿ ವೇಳೆ ಬೆಂಕಿ ಹೊತ್ತಿದ್ದು ಮನೆಯಲ್ಲಿದ್ದ 2 ಎತ್ತುಗಳು, ಅಕ್ಕಿ, ಹತ್ತಿ, ಜೋಳ ಹಾಗೂ ನಗದು ಸೇರಿ ಒಟ್ಟು 4.10 ಲಕ್ಷ ಬೆಲೆಯ ಆಸ್ತಿ ನಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement