ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾರ್ಯಕರ್ತರ ಮಾರಾಮಾರಿ; ಎರಡು ವಾಹನ ಗಾಜು ಪುಡಿ

Lingaraj Badiger
Updated On : 8 Mar 2013, 10:59 am

ಕ.ಪ್ರ. ವಾರ್ತೆ, ರಾಯಚೂರು, ಮಾ.7
ನಗರದ ಮೂರನೇ ವಾರ್ಡಿನಲ್ಲಿ ಮತದಾರರನ್ನು ನಗರದ ಹೊರವಲಯದಿಂದ ವಾಹನಗಳಲ್ಲಿ ಕರೆ ತಂದಿದ್ದನ್ನು ಪ್ರಶ್ನಿಸಿದ ಪಕ್ಷೇತರ ಅಭ್ಯರ್ಥಿ ಪರ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು ಘಟನೆಯಲ್ಲಿ 2 ವಾಹನಗಳ ಗಾಜು ಪುಡಿ ಮಾಡಲಾಯಿತು. ಈ ವೇಳೆ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದರು.
ದೇವದುರ್ಗದ ಕಡೆಯಿಂದ ಮೂರು ವಾಹನಗಳಲ್ಲಿ ಜೆಡಿಎಸ್ ಪಕ್ಷದವರು ಮತ ಹಾಕಿಸಲು ಜನರನ್ನು ಕರೆ ತಂದಿದ್ದು ಈ ಘಟನೆಗೆ ಕಾರಣವಾಯಿತು. ಈ ವೇಳೆ ಪಕ್ಷೇತರ ಅಭ್ಯರ್ಥಿ ಕಡೆಯವರು ಅದಕ್ಕೆ ಆಕ್ಷೇಪಿಸಿದಾಗ ಆಕ್ರೋಶಗೊಂಡ ಎರಡೂ ಕಡೆಯವರ ಮಧ್ಯೆ ಮಾರಾಮಾರಿ ನಡೆದು ಕೆಲ ಮತದಾರರ ಮೇಲೆ ಹಲ್ಲೆ ಮಾಡಲಾಯಿತು. ಈ ವೇಳೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ಪಡೆಯ ಸಿಬ್ಬಂದಿ ಲಘು ಲಾಠಿ ಬೀಸಿ ಗುಂಪು ಚದುರಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ನಂತರ ಮತದಾನ ಮುಂದುವರಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement