ಖಾರದ ಪುಡಿ ಎರಚಿ 10 ಲಕ್ಷ ಲೂಟಿ
ರಾಯಚೂರು: ತಾಲೂಕಿನ ಚಿಕ್ಕಸೂಗೂರು ಬಳಿ ಬೈಕ್ನಲ್ಲಿ ರು 10ಲಕ್ಷ ಕೊಂಡೊಯ್ಯುತ್ತಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿಗೆ ಖಾರದ ಪುಡಿ ಎರಚಿ ಹಣ ದೋಚಲಾಗಿದೆ. ಖಾಸಗಿ ಕಂಪನಿ ಸಿಬ್ಬಂದಿ ಬಸವರಾಜಗೌಡ ಎಂಬುವವರು ರು 10ಲಕ್ಷ ಇದ್ದ ಬ್ಯಾಗ್ ಬೈಕ್ನಲ್ಲಿ ಕೊಂಡೊಯ್ಯುತ್ತಿದ್ದಾಗ ಅವರನ್ನು ಮತ್ತೊಂದು ಬೈಕ್ನಲ್ಲಿ ಹಿಂಬಾಲಿಸಿದ ಇಬ್ಬರು ಅಪರಿಚಿತರು ಬಸವರಾಜ ಗೌಡರ ಕಣ್ಣಿಗೆ ಖಾರದ ಪುಡಿ ಎರಚಿ, ಅವರ ಬಳಿಯಿದ್ದ ಹಣದ ಚೀಲದೊಂದಿಗೆ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.