ಪಕ್ಷೇತರರಿಗೆ ಭರ್ಜರಿ ಡಿಮ್ಯಾಂಡ್
ರಾಯಚೂರು: ಜಿಲ್ಲೆಯಲ್ಲಿ ಮಾ.7ರಂದು ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ರಾಯಚೂರು ನಗರಸಭೆ, ಲಿಂಗಸ್ಗೂರು, ಮಾನವಿ ಪುರಸಭೆ ಮತ್ತು ಮುದಗಲ್ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರೇ ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ರಾಯಚೂರು ನಗರಸಭೆಯಲ್ಲಿ ಐವರು, ಲಿಂಗಸ್ಗೂರು ಪುರಸಭೆ- ಇಬ್ಬರು, ಮಾನವಿ ಪುರಸಭೆ-5 ಹಾಗೂ ಮುದಗಲ್ ಪಟ್ಟಣ ಪಂಚಾಯಿತಿಯಲ್ಲಿ ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗಳಲ್ಲಿ ಅಧಿಕಾರಕ್ಕೇರಲು ಅಗತ್ಯವಿರುವ ಬಹುಮತ ಪಡೆಯಲು ಪಕ್ಷೇತರರ ಸಹಾಯಹಸ್ತ ಅವಶ್ಯಕ. ಹೀಗಾಗಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಪಕ್ಷೇತರರಿಗೆ ಫುಲ್ ಡಿಮ್ಯಾಂಡ್ ಬಂದಿದೆ.