ಪತ್ರಕರ್ತರಿಗೆ ಪ್ರವೇಶ ನಿಷಿದ್ಧ
ರಾಯಚೂರು: ಮತ ಎಣಿಕೆ ಕೇಂದ್ರದಲ್ಲಿ ಪತ್ರಕರ್ತರಿಗೆ ಪ್ರವೇಶ ನಿಷಿದ್ಧ...
ಜಿಲ್ಲಾಧಿಕಾರಿಗಳು ಈ ಆದೇಶ ನೀಡಿದ್ದಾರೆಂದು ಹೇಳಿ ಪೊಲೀಸ್ ಅಧಿಕಾರಿಗಳು ಮಾಧ್ಯಮದವರನ್ನು ಮತ ಎಣಿಕೆ ಕೇಂದ್ರದಿಂದ ದೂರವಿರಿಸಲು ಯತ್ನಿಸಿದ ಪ್ರಸಂಗ ಸೋಮವಾರ ನಡೆಯಿತು.
ಮತಗಳ ಎಣಿಕೆ ಕೇಂದ್ರಕ್ಕೆ ಬೆಳಗ್ಗೆ ತೆರಳಿದ ಮಾಧ್ಯಮದವರಿಗೆ ಎಣಿಕೆ ಕೇಂದ್ರಕ್ಕೆ ಪ್ರವೇಶವನ್ನೇನೋ ನೀಡಲಾಯಿತು. ಆದರೆ ಮತ ಎಣಿಕೆ ಪ್ರಕ್ರಿಯೆ ವೀಕ್ಷಿಸಲು ಮಾಧ್ಯಮದವರು ಮುಂದಾದಾಗ ಪೊಲೀಸರು ಡಿಸಿ ಹೇಳಿದ್ದಾರೆ ನೀವು ಅಲ್ಲಿ ಹೋಗುವಂತಿಲ್ಲ ಎಂದು ತಡೆದರು.
ಇದರಿಂದ ಅಸಮಾಧಾನಗೊಂಡ ಪತ್ರಕರ್ತರು ಪೊಲೀಸ್ ಅಧಿಕಾರಿಗಳಿಗೆ ಮತ ಎಣಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಕೊಠಡಿ ವೀಕ್ಷಿಸುವುದು ಅನಿವಾರ್ಯ ಎಂದು ವಿವರಿಸಿದರೂ, ಡಿಸಿ ಹೇಳಿದರೆ ಪ್ರವೇಶ ಇಲ್ಲದಿದ್ದರೆ ಮೀಡಿಯಾ ಸೆಂಟರ್‌ಗೆ ತೆರಳಲು ಸೂಚಿಸಲಾಯಿತು.
ಎತ ಎಣಿಕೆ ಕೇಂದ್ರದಲ್ಲಿ ಸ್ಥಾಪಿಸಿದ್ದ ಮಾಧ್ಯಮ ಕೇಂದ್ರದಲ್ಲಿ ಕುರ್ಚಿಗಳನ್ನು ಹೊರತುಪಡಿಸಿ ಫಲಿತಾಂಶದ ವಿವರ ನೀಡುವ ಯಾವುದೇ ವ್ಯವಸ್ಥೆಯಿರಲಿಲ್ಲ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳೇ ಸ್ವತ- ಫಲಿತಾಂಶದ ಪ್ರತಿ ಹಿಡಿದು ಮಾಹಿತಿ ನೀಡಲು ತೊಡಗಿದಾಗ ಉಂಟಾಗಿದ್ದ ಗೊಂದಲ ಪರಿಹಾರ ಕಂಡಿತು.