ಮಾನವಿ ಮಸುಕು.. ಮಸುಕು...
ರಾಯಚೂರು: ಮಾನವಿ ಪುರಸಭೆಗೆ ಮಾ.7 ರಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭೆಯ ಒಟ್ಟು 22 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8 ಸ್ಥಾನ ಗಳಿಸಿ ಬಹುಮತದಿಂದ ದೂರವೇ ಉಳಿದಿದೆ.
ಮತಗಳ ಎಣಿಕೆ ಕಾರ್ಯ ಸೋಮವಾರ ಮಾನವಿ ಪಟ್ಟಣದ ಬಾಷುಮಿಯಾ ಸಾಹುಕಾರ ಪದವಿ ಕಾಲೇಜಿನಲ್ಲಿ ನಡೆಯಿತು. ಒಟ್ಟು 2 ವಾರ್ಡ್ಗಳಲ್ಲಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಆಯ್ಕೆಯಾಯಿತು. ಬಿಜೆಪಿ-4, ಜೆಡಿಎಸ್-3, ಬಿಎಸ್ಸಾರ್ ಕಾಂಗ್ರೆಸ್-2, ಕೆಜೆಪಿ-1 ಹಾಗೂ ಪಕ್ಷೇತರರು ಐದು ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಅತಂತ್ರ ಸ್ಥಿತಿ ನಿರ್ಮಾಣ.
ಗೆದ್ದ ಪ್ರಮುಖರು: ಚುನಾವಣೆಯಲ್ಲಿ ಜೆಡಿಎಸ್ನ ರಾಜಾ ಮಹೇಂದ್ರನಾಯಕ ಸತತ 4ನೇ ಬಾರಿಗೆ, ಪುರಸಭೆ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ನ ಹುಸೇನ್ ಬೇಗ್, ಸಬ್ಜಲಿಸಾಬ್, ಪುರಸಭೆ ಮಾಜಿ ಅಧ್ಯಕ್ಷೆ ಕಾಂಗ್ರೆಸ್ನ ಲಕ್ಷ್ಮೀದೇವಿ ನಾಯಕ , ಪುರಸಭೆ ಮಾಜಿ ಸದಸ್ಯೆ ಕಾಂಗ್ರೆಸ್ನ ಶಾರದಾ, ಸಾಬೀರ್ ಹುಸೇನ್, ಜೆಡಿಎಸ್ನ ಶಕೀಲ್ ಬೇಗ್ 2ನೇ ಬಾರಿಗೆ ಪುರಸಭೆಗೆ ಆಯ್ಕೆಯಾಗಿದ್ದಾರೆ.
ಸೋತ ಪ್ರಮುಖರು: ಯುವ ಕಾಂಗ್ರೆಸ್ ಅಧ್ಯಕ್ಷ ಅರುಣಕುಮಾರ ಚಂದಾ, ಪುರಸಭೆ ಮಾಜಿ ಸದಸ್ಯರಾದ ಗೊಲ್ಲರ ದೊಡ್ಡನರಸಪ್ಪ, ಮಹೆಬೂಬ್, ಜೆ.ಸುಧಾಕರ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ತನ್ವೀರುಲ್ ಹಸನ್ ವಕೀಲರು, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ದೇವರಾಜ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಸುವರ್ಣಗಿರಿಮಠ, ಜಾನಕಿ ಅನಿಲ್.
ವಾರ್ಡುವಾರು ಗೆಲುವಿನ ಅಭ್ಯರ್ಥಿಗಳು ಮತ್ತು ಪಡೆದ ಮತಗಳ ವಿವರ
ವಾರ್ಡ್ 1 ಎನ್. ಚಂದ್ರಶೇಖರ (ಬಿಎಸ್ಸಾರ್) 496 ಮತ
ವಾರ್ಡ್ 2 ರಾಜಾ ಮಹೇಂದ್ರ ನಾಯಕ (ಜೆಡಿಎಸ್ ಗೆಲುವು) 296 ಮತ
ವಾರ್ಡ್ 3 ರಾಜಾ ಶಾಮಸುಂದರ ನಾಯಕ(ಪಕ್ಷೇತರ ಗೆಲವು) 310 ಮತ
ವಾರ್ಡ್ 4 ಎನ್.ಮಲ್ಲಿಕಾರ್ಜುನ (ಪಕ್ಷೇತರ ಗೆಲುವು) 492 ಮತ
ವಾರ್ಡ್ 5 ಹುಸೇನ್ ಬೇಗ್(ಕಾಂಗ್ರೆಸ್ ಗೆಲುವು) 676 ಮತ
ವಾರ್ಡ್ 6 ರವಿಚಂದ್ರ(ಬಿಎಸ್ಸಾರ್ ಗೆಲುವು) 460 ಮತ
ವಾರ್ಡ್ 7 ಸಬಸುಮ್(ಪಕ್ಷೇತರ ಗೆಲುವು) 504 ಮತ
ವಾರ್ಡ್ 8 ಸಬ್ಜಲಿ ಸಾಬ್ (ಕಾಂಗ್ರೆಸ್ ಗೆಲುವು) 434 ಮತ
ವಾರ್ಡ್ 9 ಗಜೇಂದ್ರ(ಬಿಜೆಪಿ ಗೆಲವು) 411 ಮತ
ವಾರ್ಡ್ 10 ಶ್ರೀದೇವಿ ಬಳಿಗಾರ (ಬಿಜೆಪಿ ಗೆಲುವು) 260 ಮತ
ವಾರ್ಡ್ 11 ಶಕೀಲ್ ಬೇಗ್ (ಜೆಡಿಎಸ್ ಗೆಲುವು) 413 ಮತ
ವಾರ್ಡ್ 12 ಲಕ್ಷ್ಮೀದೇವಿ ನಾಯಕ (ಕಾಂಗ್ರೆಸ್ ಗೆಲುವು) 485 ಮತ
ವಾರ್ಡ್ 13 ಮಲ್ಲಿಕಾರ್ಜುನ (ಕೆಜೆಪಿ ಗೆಲುವು) 315 ಮತ
ವಾರ್ಡ್ 14 ಯಲ್ಲಯ್ಯ(ಕಾಂಗ್ರೆಸ್ ಗೆಲುವು) 374 ಮತ
ವಾರ್ಡ್ 15 ಹಾಜಿರಾಬೇಗಂ(ಜೆಡಿಎಸ್ ಗೆಲುವು) 226 ಮತ
ವಾರ್ಡ್ 16 ಸಾಬೀರ್ ಹುಸೇನ್(ಕಾಂಗ್ರೆಸ್) 279 ಮತ
ವಾರ್ಡ್ 17 ಆಶಾಬೀ(ಕಾಂಗ್ರೆಸ್ ಗೆಲವು) 555 ಮತ
ವಾರ್ಡ್ 18 ಶಾರದಾ(ಕಾಂಗ್ರೆಸ್) 502 ಮತ
ವಾರ್ಡ್ 19 ಯಶೋಧಮ್ಮ (ಬಿಜೆಪಿ ಗೆಲುವು) 533 ಮತ
ವಾರ್ಡ್ 20 ಅಂಬಣ್ಣ (ಪಕ್ಷೇತರ ಗೆಲುವು) 443 ಮತ
ವಾರ್ಡ್ 21 ಸೈಯದ್ ನಜೀರುದ್ದೀನ್ ಖಾದ್ರಿ (ಕಾಂಗ್ರೆಸ್) ಅವಿರೋಧ ಆಯ್ಕೆ
ವಾರ್ಡ್ 22 ದೊಡ್ಡ ಬಸವ (ಪಕ್ಷೇತರ ಗೆಲುವು) 608 ಮತ
ವಾರ್ಡ್ 23 ಸುಶೀಲಮ್ಮ (ಬಿಜೆಪಿ ಗೆಲುವು) 594 ಮತ