ಮುದಗಲ್ ಪಪಂ; ಜೆಡಿಎಸ್ಗೆ ಉತ್ಸಾಹ, 'ಕೈ'ಗೆ ನಿರಾಶೆ, ಬಿಜೆಪಿ, ಕೆಜೆಪಿ ಧೂಳೀಪಟ
ಕನ್ನಡಪ್ರಭ ವಾರ್ತೆ, ಮುದಗಲ್, ಮಾ.11
ಸ್ಥಳೀಯ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಬಿಎಸ್ಆರ್ 2 ಸ್ಥಾನವನ್ನು ಪಡೆದು ಖಾತೆಯನ್ನು ತೆರೆದಿದೆ. 9 ಸ್ಥಾನ ಗಳಿಸಿದ ಜೆಡಿಎಸ್ಗೆ ಉತ್ಸಾಹ, 7 ಸ್ಥಾನ ಗಳಿಸಿದ ಕಾಂಗ್ರೆಸ್ ನಿರೀಕ್ಷಿತ ಸ್ಥಾನ ಲಭಿಸದೇ ನಿರಾಶೆಯಾಗಿದೆ. ಬಿಜೆಪಿ, ಕೆಜೆಪಿ ಧೂಳೀಪಟವಾಗಿದೆ. ಒಟ್ಟಾರೆ ಮುದಗಲ್ ಪಟ್ಟಣ ಪಂಚಾಯತಿ ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೇ ಇರುವುದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣ ಪಂಚಾಯತಿಯ 19 ಸ್ಥಾನಗಳಲ್ಲಿ 9 ಜೆಡಿಎಸ್, 7 ಕಾಂಗ್ರೆಸ್, 2 ಬಿಎಸ್ಆರ್ ಮತ್ತು ಒಂದು ಪಕ್ಷೇತರ ಪಾಲಾಗಿದೆ. ಏತನ್ಮಧ್ಯೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪಕ್ಷೇತರ ಅಭ್ಯರ್ಥಿ ಬಿಎಸ್ಆರ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಬಿಎಸ್ಆರ್ ಮೂರು ಸ್ಥಾನ ಪಡೆದಂತಾಗಿದೆ.
ವಾರ್ಡ್ 1: ಶರಣಮ್ಮ ನಂದಪ್ಪ ಕತ್ತಿ (ಕಾಂಗ್ರೆಸ್ -528), ಸುಮಿತ್ರಾ ಸಿದ್ದಯ್ಯ (ಬಿಎಸ್ಆರ್-517).
ವಾರ್ಡ್ 2: ರಾಮಪ್ಪ ದುರಪಗಪ್ಪ (ಕಾಂಗ್ರೆಸ್-457), ಗ್ಯಾನಪ್ಪ ಆದಪ್ಪ (ಜೆಡಿಎಸ್-359).
ವಾರ್ಡ್ 3: ಸಾಹೇರಾಬಾನು (ಜೆಡಿಎಸ್-236), ಅಮೀನಾಬೇಗಂ ಬಾರಿಗಿಡ (ಕಾಂಗ್ರೆಸ್).
ವಾರ್ಡ್ 4: ನೀಲಮ್ಮ ಬಸವರಾಜ ಹೊರಪೇಟ (ಕಾಂಗ್ರೆಸ್-408), ಸಾಧಿಕಾಬೇಗಂ (ಜೆಡಿಎಸ್-251).
ವಾರ್ಡ್ 5: ವೀರಭದ್ರಪ್ಪ ಬಶೆಟೆಪ್ಪ ಕೊಳ್ಳಿ (ಪಕ್ಷೇತರ-256) ಗುಂಡಪ್ಪ ಜೀಡಿ (ಕೆಜೆಪಿ-255).
ವಾರ್ಡ್ 6: ಮಹ್ಮದ್ ಮಾಸೂಮ್ ಆರೀಫ್ (ಕಾಂಗ್ರೆಸ್-397), ಉದಯಕುಮಾರ (ಜೆಡಿಎಸ್-295). ವಾರ್ಡ್ ವಾರ್ಡ್ 7: ಹಂಪಮ್ಮ (ಜೆಡಿಎಸ್ 306), ಅಮೃತಮ್ಮ (ಕಾಂಗ್ರೆಸ್-99 ).
ವಾರ್ಡ್ 8: ಖಾಜಾಪಾಷಾ (ಜೆಡಿಎಸ್ 242), ಅಬ್ದುಲ್ ಮಜೀದ್ (ಕಾಂಗ್ರೆಸ್-240).
ವಾರ್ಡ್9: ಹೇಮಂತಕುಮಾರ ನಾಗಲಾಪೂರ (ಬಿಎಸ್ಆರ್ 146), ಅಯ್ಪಪ್ಪ (ಕಾಂಗ್ರೆಸ್-117).
ವಾರ್ಡ್ 10: ರೇವತಿ ಚಂದ್ರಶೇಖರ (ಜೆಡಿಎಸ್ 174), ಶರಣಮ್ಮ ಪಂಪಯ್ಯ (ಕಾಂಗ್ರೆಸ್ 121).
ವಾರ್ಡ್ 11: ಅಬ್ದುಲ್ ರವೂಫ್ (ಜೆಡಿಎಸ್ 595), ದೇವರಾಜ (ಬಿಎಸ್ಆರ್ 209).
ವಾರ್ಡ್ 12: ಎಸ್. ಈರಣ್ಣ (ಜೆಡಿಎಸ್ 216), ಷಣ್ಮುಖಪ್ಪ ಚಲುವಾದಿ (ಕಾಂಗ್ರೆಸ್ 128).
ವಾರ್ಡ್ 13: ಶಿವರಾಜ ತಳವಾರ (ಬಿಎಸ್ಆರ್ 306), ವಿರುಪಾಕ್ಷಪ್ಪ ಸಜ್ಜನ (ಕಾಂಗ್ರೆಸ್ 178).
ವಾರ್ಡ್ 14: ರಹಿಮತ್ ಬೇಗಂ ಚಂದಾವಲಿಸಾಬ (ಜೆಡಿಎಸ್ 497), ಹುಸೇನಬೀ (ಬಿಎಸ್ಆರ್ 141).
ವಾರ್ಡ್ 15: ಗದ್ದೆಮ್ಮ ಗಂ. ಹನುಮಂತ (ಕಾಂಗ್ರೆಸ್ 299), ವೆಂಕವ್ವ ಗಂ. ಗೋಸಲೆಪ್ಪ (ಜೆಡಿಎಸ್ 296).
ವಾರ್ಡ್ 16: ಮಹ್ಮದ್ ಸಾಧಿಕಲಿ (ಕಾಂಗ್ರೆಸ್ 344), ಮಹಿಬೂಬಸಾಬ ಡೋಂಗ್ರಿ (ಜೆಡಿಎಸ್ 145).
ವಾರ್ಡ್ 17: ಬಸಮ್ಮ ಸಂಗಪ್ಪ ಹಿರೇಮನಿ (389), ಶಾಂತವ್ವ ಮಿರ್ಜಪ್ಪ (ಕೆಜೆಪಿ 305).
ವಾರ್ಡ್ 18: ಬಂದೇನವಾಜ (ಜೆಡಿಎಸ್ 490), ಮೌಲಾಸಾಬ (ಕಾಂಗ್ರೆಸ್ 439).
ವಾರ್ಡ್ 19: ರಜ್ಜಬಲಿ ನಬೀಸಾಬ (ಜೆಡಿಎಸ್ 673), ಅಲ್ಲಾಸಾಬ (ಕಾಂಗ್ರೆಸ್ 218).