ಹೊಸಬರಿಗೆ ಸಿಹಿ, ಹಳಬರಿಗೆ ಕಹಿ
ರಾಯಚೂರು: ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಹಳಬರಲ್ಲಿ ಕೆಲವರಿಗೆ ಕಹಿ ಮತ್ತೆ ಕೆಲವರಿಗೆ ಸಿಹಿ. ಹಳಬರ ನಿರ್ಗಮನದಿಂದ ಹೊಸಬರಿಗೆ ದೊರೆತ ಅವಕಾಶ. ಮಾಜಿ ಅಧ್ಯಕ್ಷರುಗಳ ಪುನಾ ಆಯ್ಕೆಯಾದರೆ ಕಳೆದ ಅನೇಕ ಚುನಾವಣೆಗಳಲ್ಲಿ ಗೆಲವು ಸಾಧಿಸಿದ್ದವರು ಈಗ ಸೋಲುಂಡಿದ್ದಾರೆ. ನಗರಸಭೆಯಲ್ಲಿ ಕಳೆದ ಬಾರಿ ಸದಸ್ಯರಾಗಿದ್ದವರಲ್ಲಿ ಕಡೆಯ ಅವಧಿಗೆ ಅಧ್ಯಕ್ಷೆಯಾಗಿದ್ದ ಮಮತಾ ಸುಧಾಕರ್, ಮಾಜಿ ಅಧ್ಯಕ್ಷ ಮಾರೆಪ್ಪ, ಮಾಜಿ ಉಪಾಧ್ಯಕ್ಷ ದೊಡ್ಡಮಲ್ಲೇಶಪ್ಪ, ಹಿರಿಯ ಸದಸ್ಯರಾದ ಜಯಣ್ಣ, ಈಶಪ್ಪ, ಎಂ.ಪವನಕುಮಾರ್, ಪಿ.ಯಲ್ಲಪ್ಪ ಆಯ್ಕೆಯಾಗಿದ್ದಾರೆ. ಇದೇ ವೇಳೆ ಈ ಮೊದಲು ನಗರಸಭೆಯ ಸದಸ್ಯರಾಗಿದ್ದವರಲ್ಲಿ ಪ್ರಮುಖರಾದ ಜಿ. ಶಿವಮೂರ್ತಿ, ಶಶಿರಾಜ್, ತಿಮ್ಮಾರೆಡ್ಡಿ, ಯುಸೂಫ್ ಖಾನ್, ತಿಮ್ಮಪ್ಪ ಫಿರಂಗಿ, ಬಸವರಾಜ ಪಾಟೀಲ್ ದರೂರು ಸೋಲುಂಡಿದ್ದಾರೆ. ಆ ಮೂಲಕ ಹೊಸಬರು ನಗರಸಭೆಗೆ ಆಯ್ಕೆಯಾಗಿದ್ದಾರೆ.