ಆಕಸ್ಮಿಕ ವಿಷ ಸೇವನೆ: ವ್ಯಕ್ತಿ ಸಾವು
ರಾಯಚೂರು: ಸಿಂಧನೂರು ತಾಲೂಕಿನ 3ನೇ ಮೈಲ್ ಕ್ಯಾಂಪ್ನಲ್ಲಿ ಆಕಸ್ಮಿಕ ವಿಷ ಸೇವನೆಯಿಂದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ಅಬ್ದುಲ್ ಸಾಬ್ ಎಂದು ಗುರುತಿಸಲಾಗಿದೆ. ಈತ ಬತ್ತದ ಗದ್ದೆಯಲ್ಲಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿದ್ದು, ಸರಿಯಾಗಿ ಕೈ ತೊಳೆಯದೇ ಆಹಾರ ಸೇವಿಸಿದ್ದರಿಂದ ವಿಷ ದೇಹ ಸೇರಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗೆ ಬಳ್ಳಾರಿಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಟ್ರ್ಯಾಕ್ಟರ್ನಿಂದ ಬಿದ್ದು ಸಾವು
ರಾಯಚೂರು: ತಾಲೂಕಿನ ಎಲೆಬಿಚ್ಚಾಲೆ ಗ್ರಾಮದ ಬಳಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಮೃತನನ್ನು ತಿಕ್ಕಯ್ಯ ಎಂದು ಗುರುತಿಸಲಾಗಿದೆ. ಈತ ಟ್ರಾಕ್ಟರ್ ನ ಚಾಲಕನ ಪಕ್ಕದ ಆಸನದಲ್ಲಿ ಕುಳಿತು ಸಾಗುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕ ವೇಗವಾಗಿ ಓಡಿಸಿದ್ದರಿಂದ ರಸ್ತೆಯ ಏರಿಯಲ್ಲಿ ಟ್ರ್ಯಾಕ್ಟರ್ನಿಂದ ಕೆಳಗೆ ಬಿದ್ದ ಈತ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗದಲ್ಲಿ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.