ಇಂದು ಪಲ್ಲಕ್ಕಿ ಮಹೋತ್ಸವ
ರಾಯಚೂರು: ಇಲ್ಲಿಗೆ ಸಮೀಪದ ಆಂಧ್ರದ ಮಕ್ತಲ್ ತಾಲೂಕಿನ ಗುಡಿಬಲ್ಲೂರು ಗ್ರಾಮದಲ್ಲಿ ಮಾ.14ರಂದು ವಿರಾಡ್ವಿ ವಿಶ್ವಕರ್ಮ ಮೌನೇಶ್ವರರ 14ನೇ ವರ್ಷದ ಪಲ್ಲಕ್ಕಿ ಮಹೋತ್ಸವ ಆಯೋಜಿಸಲಾಗಿದೆ. ಅಂದು ಗ್ರಾಮದಲ್ಲಿ ಬ್ಯಾಗವಾಟ ಮಲ್ಲಪ್ಪ ಸಾವೂರು ವೀರೇಶಪ್ಪ ತಾತ ಅವರ ನೇತೃತ್ವದಲ್ಲಿ ಪಲ್ಲಕ್ಕಿ ಮಹೋತ್ಸವವು ಕುಂಭ ಕಳಸ, ವಾದ್ಯ ಮೇಳದೊಂದಿಗೆ ನೆರವೇರಲಿದ್ದು, ಭಕ್ತರು ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಮನವಿ ಮಾಡಿದೆ. ಮಾ.14ರಂದು ಬೆ.6ಕ್ಕೆ ಸುಪ್ರಭಾತ, 6.30ರಿಂದ 9.30ರವರೆಗೆ ವಿಶೇಷ ಪೂಜೆ ಮತ್ತು ಅಭಿಷೇಕ ಆಯೋಜಿಸಲಾಗಿದೆ. ಮ. 3ರಿಂದ ಸಂ. 7ರವರೆಗೆ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ.