ನಕಲಿಗೆ ಅವಕಾಶ ಇಲ್ಲ: ಬಸವರಾಜ
ಮುದಗಲ್: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ. ನಕಲಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥ ಬಸವರಾಜ ಹೇಳಿದರು.
ಬುಧವಾರ ಇತಿಹಾಸ ವಿಷಯ ಪರೀಕ್ಷೆ ನಡೆಯಿತು. ಒಟ್ಟು 440 ವಿದ್ಯಾರ್ಥಿಗಳ ಪೈಕಿ 421 ವಿಧ್ಯಾರ್ಥಿಗಳು ಹಾಜರಾಗಿದ್ದಾರೆ. 19 ವಿದ್ಯಾರ್ಥಿಗಳು ಗೈರಾಗಿದ್ದರು. ಈ ಪರೀಕ್ಷಾ ಕೇಂದ್ರದಲ್ಲಿ ಸಜ್ಜಲಗುಡ್ಡ, ನಾಗರಹಾಳ, ಖೈರವಾಡಗಿ, ಮುದಗಲ್ ಅನ್ನದಾನಗೌಡ ಪಾಟೀಲ್ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಇಬ್ಬರು ಮೊಬೈಲ್ ಸ್ಕ್ವಾಡ್ ಮತ್ತು ಕೊಠಡಿ ಮೇಲ್ವೀಚಾರಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಸುಗಮವಾಗಿ ಪರೀಕ್ಷೆ ಬರೆಯಲು ಅನುಕೂಲ ಮಾಡಲಾಗಿದ್ದು, ಕಾಲೇಜಿನ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.