ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶ್ರೀರಾಘವೇಂದ್ರ ಗುರುಭಕ್ತಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ

Mainashree
Updated On : 13 Mar 2013, 10:27 am

ರಾಯಚೂರು: ಮಂತ್ರಾಲಯದಲ್ಲಿ ಬುಧವಾರ ಶ್ರೀರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀರಾಘವೇಂದ್ರ ಗುರುಭಕ್ತಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಶ್ರೀಗುರುಭಕ್ತಿ ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಪೂಜೆ, ಅಲಂಕಾರ ನೇರವೇರಿಸಲಾಯಿತು. ಈ ವೇಳೆ ಶ್ರೀಸುಯತೀಂದ್ರತೀರ್ಥ ಸ್ವಾಮೀಜಿಗಳು ಶ್ರೀಮೂಲರಾಮದೇವರ ಪೂಜೆ ನೆರವೇರಿಸಿ ಶ್ರೀರಾಯರ ಬೃಂದಾವನಕ್ಕೆ ಭಕ್ತಿ ಸಮರ್ಪಿಸಿದರು.
ರಥೋತ್ಸವ: ಅದೇ ರೀತಿ ಶ್ರೀರಾಘವೇಂದ್ರಸ್ವಾಮಿಗಳ ಮೂಲ ಪಾದುಕೆಗಳಿಗೆ ಶ್ರೀಗಳು ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು. ನಂತರ ಪಾದುಕೆಗಳನ್ನು ಚಿನ್ನದ ರಥದಲ್ಲಿರಿಸಿ ಶ್ರೀಮಠದ ಪ್ರಾಕಾರದಲ್ಲಿ ರಥೋತ್ಸವ ನೆರವೇರಿಸಲಾಯಿತು.  ಚೆನ್ನೈನ ಹನುಮಂತಪುರಂ ಪಲ್ಲಕ್ಕಿ ಸೇವಾ ಟ್ರಸ್ಟ್ ಮತ್ತು ಇತರೆ ದಾನಿಗಳು ಶ್ರೀಮಠಕ್ಕೆ ಕೊಡಮಾಡಿದ ನವರತ್ನ ರಥಕ್ಕೆ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶ್ರೀಮಠದ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ ಅವರ ನೇತೃತ್ವದಲ್ಲಿ ನವರತ್ನ ರಥದ ಸಂಸ್ಕಾರ ಹೋಮ ಹವನಾದಿ ನೆರವೇರಿಸಲಾಯಿತು. ವಿದ್ಯಾಪೀಠದ ವಿದ್ವಾಂಸರಿಂದ ಪ್ರವಚನ, ವಿದ್ಯಾರ್ಥಿಗಳಿಂದ ವೇದ ಮಂತ್ರ ಪಠಣ ಈ ವೇಳೆ ಆಯೋಜಿಸಲಾಗಿತ್ತು. ಶ್ರೀಗುರುಭಕ್ತಿ ಉತ್ಸವದ ಮೊದಲ ದಿನದ ಕಾರ್ಯಕ್ರಮಗಳಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement