ಇಂದು ದತ್ತಿ ಉಪನ್ಯಾಸ
ಕನ್ನಡಪ್ರಭ ವಾರ್ತೆ ಸಿಂಧನೂರು ಮಾ.14
ನಗರದ ಶರಣಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಮಾ.15ರಂದು ಸಂಜೆ 5.30ಕ್ಕೆ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶ್ರೀಶೈಲ ಕೌದಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ವಹಿಸುವರು. ನೀಲಕಂಠಗೌಡ ಪಾಟೀಲ್ ಗೊರೇಬಾಳ ಸ್ಮಾರಕ ದತ್ತಿಯ ಉಪನ್ಯಾಸವನ್ನು, ಕೃಷಿ ಮತ್ತುಗ್ರಾಮೀಣಾಭಿವೃದ್ಧಿ ವಿಷಯ ಕುರಿತು ಸಹಾಯಕ ಕೃಷಿ ಅಧಿಕಾರಿ ಶರಣಬಸವ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾ ಗೌರವಾಧ್ಯಕ್ಷ ಎಸ್.ಶರಣೇಗೌಡ, ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಗಿರಿಜಾ ಮಹಿಳಾ ಪಪೂ ಕಾಲೇಜು ಉಪನ್ಯಾಸಕರಾದ ವೀರನಗೌಡ ಗುಮಗೇರಿ, ದತ್ತಿ ದಾನಿಗಳಾದ ವಿದ್ಯಾವತಿ ನೀಲಕಂಠಗೌಡ ಪಾಟೀಲ್, ನಗರಸಭೆ ನೂತನ ಸದಸ್ಯ ಶರಣಬಸವ ಪಾಟೀಲ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವೀರೇಶ ಗೋನವಾರ, ಶರಣ ಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ನೀಲಮ್ಮ ಗಂಗಾಧರಯ್ಯ ಹಿರೇಮಠ ಭಾಗವಹಿಸಲಿದ್ದಾರೆ. ಸಾಹಿತ್ಯಾಸಕ್ತರು ಭಾಗವಹಿಸುವಂತೆ ಗೌರವ ಕೋಶಾಧ್ಯಕ್ಷ ಆರ್.ಸಿ. ಪಾಟೀಲ್ ಮನವಿ ಮಾಡಿದ್ದಾರೆ.
ಕವನಗಳಿಗೆ ಆಹ್ವಾನ: ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕು ಮಟ್ಟದ ಕವನ ಸಂಕಲನವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ತಾಲೂಕಿನ ಆಸಕ್ತ ಯುವಕವಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ಮಾ.20ರೊಳಗಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಬೇಕು. ವಿವರಕ್ಕೆ ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ್ ಕೌದಿ ಮೊ. 99725 92686, ವೀರೇಶ ಗೋನವಾರ ಮೊ. 96200 91050ಕ್ಕೆ ಅವರಿಗೆ ಸಂಪರ್ಕಿಸಬಹುದು.