ಇಂದು ವಿದ್ಯುತ್ ಪೂರೈಕೆ ಸ್ಥಗಿತ
ರಾಯಚೂರು: ತಾಲೂಕಿನ ಶಕ್ತಿನಗರದ ವಿದ್ಯುತ್ ವಿತರಣಾ ಕೇಂದ್ರದ 11ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರದ ಕಾರ್ಯ ಹಿನ್ನೆಲೆ ಮಾ.15ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶಕ್ತಿನಗರ ಮತ್ತು ಚಿಕ್ಕಸ್ಗೂರಿನ ಸ್ಟೇಷನ್‌ನ ಎಲ್ಲ 11ಕೆವಿ ಮಾರ್ಗಗಳಿಂದ ವಿದ್ಯುತ್ ಪಡೆಯುವ ಪ್ರದೇಶದಲ್ಲಿ ಮಾ. 15ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಿರುವುದಿಲ್ಲ ಎಂದು ಜೆಸ್ಕಾಂ ತಿಳಿಸಿದೆ.