ಕುಡಿವ ನೀರು ವ್ಯವಸ್ಥೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.14
ತಾಲೂಕಿನ ಚಿಕ್ಕನಗನೂರು ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಿಸುವ ಪರಿಸ್ಥಿತಿ ಉದ್ಭವಿಸಲಿದೆ. ಕುಡಿಯುವ ನೀರಿನ ತೊಂದರೆ ಕುರಿತು ಶಾಸಕರಿಗೆ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ಗ್ರಾಮದ ಶಿವಲಿಂಗೇಶ್ವರ ನಗರದ ನಿವಾಸಿಗಳಿಗೆ ವಾರದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ತಮ್ಮ ಕಾರ್ಯಾಲಯದ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಅಮಲಯ್ಯ ಚಿಕ್ಕನಗನೂರು, ಮುಖಂಡರಾದ ಅಮರಪ್ಪ ಚಿಂಚರಕಿ, ಬಸವಕುಮಾರ, ಮೌಲಪ್ಪ, ಅಲ್ಲಾಭಕ್ಷ, ಶಿವಲಿಂಗಪ್ಪ, ಬಸವಕುಮಾರ, ಈರಪ್ಪ, ನಾಗರಾಜ, ಮುತ್ತಮ್ಮ, ಅಡಿವೆಮ್ಮ, ಬಸಮ್ಮ, ಸೂಗಮ್ಮ, ಕಮಲಾಬಾಯಿ, ಹಂಪಮ್ಮ, ಲಕ್ಷ್ಮಮ್ಮ ಇದ್ದರು.