ಇಂದಿನಿಂದ ಸುಧಾಮಂಗಳ ಮಹೋತ್ಸವ
ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾ.16 ಮತ್ತು 17ರಂದು ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವ ನಡೆಯಲಿದೆ.
ಶ್ರೀಮಠದಲ್ಲಿ ಬೆಳಗ್ಗೆ 8.30ಕ್ಕೆ ನವರತ್ನ ರಥದಲ್ಲಿ ಮೂಲರಘುಪತಿ ಶ್ರೀವೇದವ್ಯಾಸರ ಮೆರವಣಿಗೆ, 9 ಗಂಟೆಗೆ ಶ್ರೀಮನ್ಯಾಯ ಸುಧಾ ಮಂಗಳ ಸಮಾರಂಭದ ಉದ್ಘಾಟನೆ ಜರುಗಲಿದೆ.
ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಯತೀಂದ್ರ ತೀರ್ಥರು, ಉಡುಪಿಯ ಪೇಜಾವರ ಮಠಾಧೀಶರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.