ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಾಸವಿ ವೃತ್ತ ನಿರ್ಮಾಣಕ್ಕೆ ಪಾಪಾರೆಡ್ಡಿ ಭೂಮಿ ಪೂಜೆ

Lingaraj Badiger
Updated On : 16 Mar 2013, 10:58 am

ಕನ್ನಡಪ್ರಭ ವಾರ್ತೆ,ರಾಯಚೂರು,ಮಾ.15
ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ವೆಚ್ಚದಲ್ಲಿ ವಾಸವಿ ವೃತ್ತ ನಿರ್ಮಿಸಲಾಗುತ್ತಿದ್ದು, ವಾಸವಿ ನಗರ ಬಡಾವಣೆಯ ಸೌಂದರ್ಯಕ್ಕೆ ಮೆರುಗು ತರುವಂತೆ ಮಾಡುವುದಾಗಿ ಮಾಜಿ ಶಾಸಕ ಪಾಪಾರೆಡ್ಡಿ ಹೇಳಿದರು.
ಅವರು ನಗರದಲ್ಲಿ ಶುಕ್ರವಾರ ವಾಸವಿ ವೃತ್ತದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ ವರ್ಷ ವಾಸವಿ ಜಯಂತಿಯ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದವರಿಗೆ ಭರವಸೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಸದ್ಯ ವೃತ್ತ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಅತೀ ಶೀಘ್ರದಲ್ಲಿಯೇ ವಾಸವಿ ವೃತ್ತ ನಿರ್ಮಾಣ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತದೆ. ಈ ಬಾರಿ ನಗರಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು. ವಾರ್ಡ್ 17ರಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಅವರು ಸ್ಪರ್ಧಿಸಿದ್ದರು. ಅವರಿಗೆ ಬೆಂಬಲವಾಗಿ ಆರ್ಯವೈಶ್ಯ ಸಮಾಜ ನಿಂತು ಗೆಲ್ಲಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಆರ್‌ಡಿಎ ಮುಖಾಂತರ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆರ್ಯವೈಶ್ಯರ ಮನವಿಯನ್ನು ಪರಿಗಣಿಸಿ ವಾಸವಿ ವೃತ್ತ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದಿಂದ 10 ಲಕ್ಷ ವೆಚ್ಚದಲ್ಲಿ ವೃತ್ತ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ನಗರಸಭೆಯ ನೂತನ ಸದಸ್ಯ ಬಿ. ಗೋವಿಂದ, ಆರ್‌ಡಿಎ ಸದಸ್ಯರಾದ ಕೆ. ರವಿಕುಮಾರ್, ಡಿ. ವೀರೇಶ ಕುಮಾರ್, ನರಸುಬಾಯಿ, ಜಿ. ಭೀಮಣ್ಣ, ಗುರುಪಾದಯ್ಯ, ಕಿರಿಯ ಎಂಜಿನಿಯರ್ ಶ್ರೀನಿವಾಸ ಮತ್ತು ಬಿಜೆಪಿ ಮುಖಂಡರಾದ ಗಿರೀಶ್ ಕನಕವೀಡು, ಪಲುಗುಲ ನಾಗರಾಜ, ವೀರಣ್ಣ ಮುದ್ಗಲ್, ಶಿವುಕುಮಾರ್, ಗಾಣಧಾಳ ಲಕ್ಷ್ಮಿಪತಿ, ಆರ್ಯವೈಶ್ಯ ಸಮಾಜದ ಕೊಂಡಾ ಕೃಷ್ಣಮೂರ್ತಿ, ಮಾರಂ ತಿಪ್ಪಣ್ಣ, ಎಂ.ಆರ್. ವೀರಣ್ಣ, ಮಂಚಾಲ ಶ್ರೀನಿವಾಸ್, ಆರ್ಯವೈಶ್ಯ  ಮಹಾಸಭೆಯ ಕುಂಟ್ನಾಳ್ ವೆಂಕಟೇಶ, ಕೆ. ಭೀಮಾಶಂಕರ್ ಮತ್ತು ವಿವಿಧ ಆರ್ಯವೈಶ್ಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
---
ಪುರಸಭೆ ಸದಸ್ಯರಿಗೆ ಸನ್ಮಾನ
ಲಿಂಗಸ್ಗೂರು: ಪುರಸಭೆಗೆ ನೂತನವಾಗಿ ಆಯ್ಕೆಯಾದ ಮುಸ್ಲಿಂ ಸಮಾಜದ ಸದಸ್ಯರಿಗೆ ತಂಜುಮಿನ್ ಮಸ್ಲಿಮಿನ್ ಜಮೀಯಾ ಮಸ್ಜಿದ್ ಕಮಿಟಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಸದಸ್ಯರಾದ ಖಾದರಪಾಶಾ, ಫಯಾಜ್ ಅಹ್ಮದ್, ಅನೀಸ್ ಪಾಶಾ, ಎಂ.ಡಿ.ರಫಿ, ಜಾಫರುದ್ದಿನ್ ಬಾಬಾಖಾಜಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಮಹಿಳಾ ಸದಸ್ಯೆಯರಾದ ಅನ್ನುಬೇಗಂ, ಜರೀನಾಬೇಗಂ, ಛೋಟಿಮಾ ಅವರ ಪರವಾಗಿ ಅವರ ಸಂಬಂಧಿಕರನ್ನು ಸನ್ಮಾನಿಸಲಾಯಿತು. ಜಾಮೀಯಾ ಮಸ್ಜಿದ್ ಅಧ್ಯಕ್ಷ ರೈಸ್ ಚವೂಸ್, ಮುಖಂಡರಾದ ನಬಿಸಾಬ ಮನಿಯಾರ, ಅಹ್ಮದ್ ಜವೂಸ್, ನವಾಬ್, ರಿಯಾಜ್, ಖಾಜಾಹುಸೇನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement